ಕೇರಳದ ಮೆಡಿಕಲ್ ಕಾಲೇಜು ಬಳಿ ಸ್ಫೋಟಕ ತುಂಬಿದ 100 ಕ್ಕೂ ಹೆಚ್ಚು ಬಾಕ್ಸ್ ವಶಕ್ಕೆ : ಬೆಚ್ಚಿಬಿದ್ದ ಜನ
ತಿರುವನಂತಪುರಂ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಬೆಚ್ಚಿಬೀಳುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ವೈದ್ಯಕೀಯ ಕಾಲೇಜು ಬಳಿಯ ವ್ಯಾನ್‌ನಿಂದ ಜಿಲೆಟಿನ್ ಕಡ್ಡಿಗಳು ಸೇರಿದಂತೆ ಸ್ಫೋಟಕ ತುಂಬಿದ 100ಕ್ಕೂ ಹೆಚ್ಚು ಬಾಕ್ಸ್‌ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ಫೋಟಕ ತಿಂಬಿದ ಪೆಟ್ಟಿಗೆಗಳನ್ನ ಪಿಕಪ್ ವಾಹನದಲ್ಲಿ ರಹಸ್ಯವಾಗಿ ಸಾಗಿಸಲಾಗುತ್ತಿತ್ತು. ಆದ್ರೆ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಸಿಕ್ಕಿಬಿದ್ದಿದ್ದು, ಇಡೀ ಕೇರಳದಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಪಾಲಕ್ಕಾಡ್ ವೈದ್ಯಕೀಯ ಕಾಲೇಜು...







