Thursday, March 12, 2026

ಸುದ್ದಿ

ಸುದ್ದಿ

ವಿದ್ಯುತ್ ಅವಘಡದಲ್ಲಿ ಹೊತ್ತಿ ಉರಿದು ಹಾನಿಯಾಗಿದ್ದ ರಾಜೇಶ್ವರಿ ಗಣೇಶ್ ಕೋಡಿ ರವ ಮನೆಯಲ್ಲಿ ಶ್ರಮ ಸೇವೆಗೈದ ಕಲ್ಲಡ್ಕದ ಶೌರ್ಯ ವಿಪತ್ತು ನಿರ್ವಹಣಾ ತಂಡ -ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಗಣೇಶ್ ಕೋಡಿ ನಿವಾಸಿ ರಾಜೇಶ್ವರಿರವರ ಮನೆಯು ಇತ್ತೀಚೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದು ಹಾನಿ ಸಂಭವಿಸಿದ್ದು,, ಮನೆಯನ್ನು ದುರಸ್ತಿಗೊಳಿಸುವ ನಿಮಿತ್ತ ಮೇಲ್ಚಾವಣಿ ತೆರವು ಗೊಳಿಸುವ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಶ್ರಮದಾನ ಸೇವೆ ಮಾಡುವ ಮೂಲಕ ತೆರವು ಮಾಡಿಕೊಟ್ಟರು. ಈ ಕಾರ್ಯದಲ್ಲಿ ಕಲ್ಲಡ್ಕ ವಲಯ ಶೌರ್ಯ...
ಸುದ್ದಿ

ಪುತ್ತೂರಿನ ಬಾಲವನದಲ್ಲಿ ಅಸ್ಮಿತಾ -ಖೇಲೋ ಇಂಡಿಯಾ ಮಹಿಳಾಲೀಗ್- ಸ್ವಿಮ್ಮಿಂಗ್ ಸ್ಪರ್ಧೆ -ಕಹಳೆ ನ್ಯೂಸ್

ಪುತ್ತೂರು : ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ (MYAS), ಖೇಲೋ ಇಂಡಿಯಾ ಉಪಕ್ರಮದ ಮೂಲಕ, ಅಸ್ಮಿತಾ - ಖೇಲೋ ಇಂಡಿಯಾ ಮಹಿಳಾಲೀಗ್ಗಳನ್ನು ಉತ್ತೇಜಿಸುತ್ತಿದ. ಕ್ರೀಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅಸ್ಮಿತಾ ಎಂಬ ಮಹಿಳಾಲೀಗ್ಗನ್ನು ದೇಶದಾದ್ಯಂತ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಕ್ರೀಡೆಗಳಾದ ಸ್ವಿಮ್ಮಿಂಗ್, ವೆಯಿಟ್ಲಿಫ್ಟಿಂಗ್,ಯೋಗ ,ಕರಾಟೆ, ವಾಲಿಬಾಲ್ ತ್ಯಾದಿ ವಿಭಾಗಗಳಲ್ಲಿ ಹಮ್ಮಿಕ್ಕೊಳ್ಳಲಾಗುತ್ತಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (SAI), MyGov ಸಹಯೋಗದೊಂದಿಗೆ ಅಸ್ಮಿತಾ - ಖೇಲೋ ಇಂಡಿಯಾ ಮಹಿಳಾ...
ಸುದ್ದಿ

ಬೆಳ್ತಂಗಡಿ ಕೋರ್ಟ್‌ಗೆ ನಕ್ಸಲ್ ಆರೋಪಿ ಜಯಣ್ಣ ಹಾಜರು – ಕಹಳೆ ನ್ಯೂಸ್

ಬೆಳ್ತಂಗಡಿ :ಕುತ್ಲೂರು ಗ್ರಾಮದ ಲಿಂಗಪ್ಪ ಮಲೆಕುಡಿಯ ಅವರ ಮನೆಯಲ್ಲಿ ನಕ್ಸಲ್ ಸಂಬಂಧಿತ ಕರಪತ್ರ ಹಂಚಿಕೆ ಹಾಗೂ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದ ಆರೋಪಿ ಜಾನ್ ಅಲಿಯಾಸ್ ಜಯಣ್ಣ ರಾಯಚೂರು ಅವರು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾದರು. ಈ ಪ್ರಕರಣವು ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ವಿರುದ್ದ ನಕ್ಸಲ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕೆ ವ್ಯಕ್ತವಾಗಿತ್ತು. ಪ್ರಕರಣದ ಅನುಸಂಧಾನದ ಭಾಗವಾಗಿ ಕೇರಳ ಪೊಲೀಸರು 'ಬಾಡಿ ವರಂಟಿ '...
ಸುದ್ದಿ

ಸಾರಿಗೆ ನೌಕರರು ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ: ಮುಷ್ಕರ ಕೈಬಿಡುವಂತೆ ಡಿಕೆಶಿ ಮನವಿ – ಕಹಳೆ ನ್ಯೂಸ್

ಬೆಂಗಳೂರು: ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆಯವರು ಅರ್ಥ ಮಾಡಿಕೊಳ್ಳಬೇಕು. ದಯವಿಟ್ಟು ಸಾರಿಗೆ ನೌಕರರೆಲ್ಲ ಸಹಕಾರ ಮಾಡಬೇಕು ಎಂದು ಮುಷ್ಕರ ಕೈಬಿಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣಾ ವೀಕ್ಷಕರಾಗಿ ಬೆಂಗಳೂರಿನಿಂದ ಅಸ್ಸಾಂಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಅಷ್ಟು ಕೊಟ್ಟಿದ್ದಾರಲ್ಲ ಅದಕ್ಕೆ ಅವ್ರು ಖುಷಿ ಪಡಬೇಕು. ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆಯವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಬೆಂಗಳೂರಲ್ಲಿ ಕಸದ ಸಮಸ್ಯೆ ವಿಚಾರವಾಗಿ ಮಾತನಾಡಿ, ಯಾರು ಕಸ...
ಸುದ್ದಿ

ಸೌತ್ ಕೆನರಾ ಫೋಟೋಗ್ರಾಫರ್ಸ್ ಕುಂದಾಪುರ-ಬೈಂದೂರು ವಲಯದ ಪದಪ್ರದಾನ ಸಮಾರಂಭ -ಕಹಳೆ ನ್ಯೂಸ್

ಉಡುಪಿ  : ಸೌತ್ ಕೆನರಾ ಫೊಟೋಗ್ರಾಫರ್ಸ್ ಆಸೋಸಿಯೇಶನ್(ರಿ.) ದ.ಕ.-ಉಡುಪಿ ಜಿಲ್ಲೆ, ಕುಂದಾಪುರ-ಬೈಂದೂರು ವಲಯದ 2025-27 ನೇ ಸಾಲಿನ ಪದಪ್ರದಾನ ಸಮಾರಂಭ ವಂಡ್ಸೆಯ ಶ್ರಿಯಾ ಕನ್ವೆನ್ಷನ್ ಹಾಲ್ ಇಲ್ಲಿ ಫೆ.17 ರಂದು ನಡೆಯಿತು. ವಂಡಾರು ಶ್ರೀಕೃಷ್ಣಪ್ರಸಾದ್ ಕ್ಯಾಶ್ಯೂಸ್ನ ಮಾಲಕರಾದ ಸಂಪತ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವೂದರ ಮೂಲಕ ಉದ್ಘಾಟಿಸಿ ಮಾತನಾಡಿ ಛಾಯಾಗ್ರಾಹಕರು ಇಲ್ಲದೆ ಇದ್ದರೆ ನಮ್ಮ ಯಾವುದೇ ನೆನಪುಗಳನ್ನು ಸ್ಮರಿಸಿಕೊಳ್ಳಲು ಸಾಧ್ಯವಿಲ್ಲ, ಜೀವನದ ಯಾವುದೇ ಸಿಹಿ ಘಟನೆಗಳನ್ನು ನೀವು ತೆಗೆದಿರುವ...
ಸುದ್ದಿ

ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದ ಸಾವು – ಕಹಳೆ ನ್ಯೂಸ್

ಹಾಸನ: ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಹನುಮಂತಪುರ ಬಳಿಯ ಕಾರ್ಖಾನೆಯಲ್ಲಿ ನಡೆದಿದೆ. ಪುನೀತ್ (27) ಮೃತ ಯುವಕ. ಪುನೀತ್ ಕಳೆದ 6 ತಿಂಗಳಿನಿಂದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಬುಧವಾರ ಎಂದಿನಂತೆಯೇ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದ. ರಾತ್ರಿ ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶವಾಗಾರದ ಬಳಿ ನೂರಾರು ಮಂದಿ ಜಮಾಯಿಸಿದ್ದಾರೆ....
ಸುದ್ದಿ

ಟೆಕ್ಕಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಇರಿದು ಕೊಂದ ವ್ಯಕ್ತಿ – ಕಹಳೆ ನ್ಯೂಸ್

ಹೈದರಾಬಾದ್: ವ್ಯಕ್ತಿಯೊಬ್ಬ ಟೆಕ್ಕಿಯಾಗಿದ್ದ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ ಆ ಮಹಿಳೆಯೇ ಕಾರಣ ಎಂದು ವ್ಯಕ್ತಿ ಆರೋಪಿಸಿದ್ದಾನೆ. ಮಹಿಳೆಯ ಎರಡನೇ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆ ಮೂರು ತಿಂಗಳ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. 30 ರ ಹರೆಯದ ಕೊಲೆ ಆರೋಪಿ 2022 ರಲ್ಲಿ...
ಸುದ್ದಿ

ಪುತ್ತೂರಿನಲ್ಲಿ ರತ್ನಶ್ರೀ ಕ್ಯಾಟರರ್ಸ್ ಹೊಸ ಕಚೇರಿ ಉದ್ಘಾಟನೆ – 25 ವರ್ಷದ ಸಾಧನೆಗೆ ಸಂಭ್ರಮ -ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ತೆಂಕಿಲದಲ್ಲಿ ಪ್ರಸಿದ್ದ ಸಂಸ್ಥೆಯಾಗಿರುವ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್‌ ತನ್ನ 25 ವರ್ಷಗಳ ಯಶಸ್ವಿ ಪಯಣವನ್ನು ಸಂಭ್ರಮಿಸುತ್ತಿದ್ದು, ಹೊಸ ಕಚೇರಿ ಉದ್ಘಾಟನೆಗೆ ಸಜ್ಜಾಗಿದೆ. ಗುಣಮಟ್ಟದ ಸೇವೆ, ನಂಬಿಕೆ ಮತ್ತು ವ್ಯವಸ್ಥಿತ ಕಾರ್ಯಪದ್ಧತಿಯಿಂದ ಗ್ರಾಹಕರ ಮನ ಗೆದ್ದಿರುವ ಈ ಸಂಸ್ಥೆ, ಇದೀಗ ತನ್ನ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಕಚೇರಿಯನ್ನು ಆರಂಭಿಸುತ್ತಿದೆ. ಹೊಸ ಕಚೇರಿ ಉದ್ಘಾಟನಾ ಕಾರ್ಯಕ್ರಮವು ಫೆ. 20 ರಂದು ಬೆಳಿಗ್ಗೆ 9.00 ಗಂಟೆಗೆ ನಡೆಯಲಿದೆ....
1 23 24 25 26 27 3,288
Page 25 of 3288