ಪುತ್ತೂರು ಮಹಿಳಾ ಕಾಲೇಜು: ಮೂಲಭೂತ ಸಮಸ್ಯೆ ಬಗೆಹರಿಸಲಾಗದ ಶಾಸಕ ಅಶೋಕ್ ರೈ ಅವರಿಂದ ಪ್ರಾಂಶುಪಾಲರ ಅಮಾನತಿನ ‘ಒಣ ಪ್ರತಿಷ್ಠೆ’ : ಶಾಸಕ ಕಿಶೋರ್ ಕುಮಾರ್ ಆಕ್ರೋಶ – ಕಹಳೆ ನ್ಯೂಸ್
ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಮೂಲಭೂತ ಸೌಕರ್ಯಗಳ ಕೊರತೆ ಮತ್ತು ವಿಪರೀತ ಧೂಳಿನ ಸಮಸ್ಯೆಯಿಂದ ಬೇಸತ್ತು ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕೆ, ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ವೇದಶ್ರೀ ನಿಡ್ಯಾ ಅವರನ್ನು ಅಮಾನತು ಮಾಡಿಸಿರುವ ಪುತ್ತೂರು ಶಾಸಕ ಅಶೋಕ್ ರೈ ಅವರ ದ್ವೇಷದ ರಾಜಕಾರಣವನ್ನು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಉಗ್ರವಾಗಿ ಖಂಡಿಸಿದ್ದಾರೆ. ವಿದ್ಯಾರ್ಥಿನಿಯರ ಹಿತಾಸಕ್ತಿಗೆ ಸ್ಪಂದಿಸಿದ ಪ್ರಾಮಾಣಿಕ...







