Friday, March 20, 2026

ಸುದ್ದಿ

ಸುದ್ದಿ

ಮೂಡಬಿದಿರೆ ಯ ಸೈoಟ್ ಥೋಮಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ದ. ಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು ಪುತ್ತೂರು ಇಲ್ಲಿಯ ವಿದ್ಯಾರ್ಥಿ ಭವಿನ್. ಎಸ್. ಕೆ ದ್ವಿತೀಯ ಸ್ಥಾನ -ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮ ದ ಕಡಮ್ಮಜೆ ಶಿವಪ್ರಸಾದ್ ಹಾಗೂ ಚಿತ್ರ ದಂಪತಿಯ ಪುತ್ರ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು ಪುತ್ತೂರು ಇಲ್ಲಿಯ 7ನೇ ತರಗತಿ ವಿದ್ಯಾರ್ಥಿ ಭವಿನ್. ಎಸ್. ಕೆ ಇವರು ದಿನಾಂಕ 22/12/25ನೇ ಸೋಮವಾರ ಮೂಡಬಿದಿರೆ ಯ ಸೈoಟ್ ಥೋಮಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ದ. ಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ನೇ ಸಾಲಿನ ಹಿರಿಯ ಪ್ರಾಥಮಿಕ ವಿಭಾಗದ ಕ್ಲೇ ಮಾಡೆಲಿಂಗ್...
ಸುದ್ದಿ

ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಡಿ.26ದಂದು ಜನಸ್ಪಂದನಾ ಕಾರ್ಯಕ್ರಮ -ಕಹಳೆ ನ್ಯೂಸ್

ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ದಿನಾಂಕ: 26 ಡಿಸೆಂಬರ್ 2025, ಶುಕ್ರವಾರ ದಂದು ಜನರ ಬಳಿಗೆ-ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ. 1.ಪೂರ್ವಾಹ್ನ - 9.30 - ಗ್ರಾಮ ಪಂಚಾಯತ್ ಲಾಯಿಲ 2. ಪೂರ್ವಾಹ್ನ - 11.00 - ಸ.ಹಿ.ಪ್ರಾ ಶಾಲೆ ನಾವೂರು 3. ಅಪರಾಹ್ನ - 2.00 - ಗ್ರಾಮ ಪಂಚಾಯತ್ ಮಲವಂತಿಗೆ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಕನ್ನಡ ಸಾಹಿತ್ಯ ಪರಿಷತ್, ಪುತ್ತೂರು ಇವರ ಆಶ್ರಯದಲ್ಲಿ ಡಿ.28ರಂದು ಪುತ್ತೂರಿನ ಜಿ.ಎಲ್. ವನ್ ಮಾಲ್ ನಲ್ಲಿ ಚಿತ್ರಕಲ್ಲಾ ಸ್ಪರ್ಧೆ- ಕಹಳೆ ನ್ಯೂಸ್

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಕನ್ನಡ ಸಾಹಿತ್ಯ ಪರಿಷತ್, ಪುತ್ತೂರು ಇವರ ಆಶ್ರಯದಲ್ಲಿ ಡಿ.28ರಂದು ಪುತ್ತೂರಿನ ಜಿ.ಎಲ್. ವನ್ ಮಾಲ್ ನಲ್ಲಿ ಚಿತ್ರಕಲ್ಲಾ ಸ್ಪರ್ಧೆ ನಡೆಯಲಿದೆ. ವಿಭಾಗಗಳು >ಪ್ರಾಥಮಿಕ, ಪ್ರೌಢ ಶಾಲಾ, ಪಿಯುಸಿ, ಪದವಿ ಕಾಲೇಜು, ಸ್ನಾತಕೋತ್ತರ ಕಾಲೇಜು >ಸಾರ್ವಜನಿಕ ವಿಭಾಗ ಹಾಗೂ ದಿವ್ಯಾಂಗ ಕಲಾವಿದರಿಗೆ > ವಿಶೇಷ ವಿಭಾಗ (15 ವರ್ಷ ಮೇಲ್ಪಟ್ಟು) >ಪ್ರಥಮ | ದ್ವಿತೀಯ |ತೃತೀಯ ಬಹುಮಾನ ಮತ್ತು ಪ್ರಮಾಣ ಪತ್ರ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಡಿ.27: ಗೋಲ್ಡ್ ಫಿಂಚ್ ಸಿಟಿಯಲ್ಲಿ 9ನೇ ವರ್ಷದ ರಾಮಲಕ್ಷ್ಮಣ ಜೋಡುಕರೆ ಕಂಬಳ; ಕ್ಯಾ.ಬ್ರಿಜೇಶ್ ಚೌಟ – ಕಹಳೆ ನ್ಯೂಸ್

ಮಂಗಳೂರು: "9ನೇ ವರ್ಷದ ರಾಮಲಕ್ಷ್ಮಣ ಜೋಡುಕರೆ ಕಂಬಳವು ಶನಿವಾರ(ಡಿ. 27) ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ" ಎಂದು ಕಂಬಳ ಸಮಿತಿಯ ಅಧ್ಯಕ್ಷ ಸಂಸದ ಕ್ಯಾ.ಬ್ರಿಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. "ಅಂದು ಬೆಳಗ್ಗೆ 8 ಗಂಟೆಗೆ ಕಂಬಳದ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಯನ್ನು ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊತ್ತೇಸರ ಚಿತ್ತರಂಜನ್‌ ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ ಸಹಿತ ಶಾಸಕರು, ರಾಜಕೀಯ ಸಾಮಾಜಿಕ...
ಸುದ್ದಿ

ಕರಾವಳಿ ಉತ್ಸವಕ್ಕೆ ರಂಗು ತಂದ ಶಂಕರ ಮಹಾದೇವನ್: ಚಳಿ ಮರೆಸಿದ ಸಂಗೀತ – ಕಹಳೆ ನ್ಯೂಸ್

ಕಾರವಾರ: ಚುಮುಚುಮು ಚಳಿ, ಚಿಮುಕುತ್ತಿದ್ದ ಮಂಜಿನಿಂದ ಸಣ್ಣಗೆ ನಡುಗುತ್ತಿದ್ದ ಸಹಸ್ರಾರು ಪ್ರೇಕ್ಷಕರು ಒಮ್ಮೆಲೇ ಚಳಿ ಮರೆತು ಕರತಾಡನ ಮಾಡಲಾರಂಭಿಸಿದರು. ಮಯೂರ ವರ್ಮ ವೇದಿಕೆಯಲ್ಲಿ 'ಗಣನಾಯಕಾಯ ಗಣದೈವತಾಯ..' ಗೀತೆ ಮೊಳಗುತ್ತಿದ್ದಂತೆ ಪ್ರೇಕ್ಷಕರ ಉದ್ಘೋಷ ಮುಗಿಲು ಮುಟ್ಟಿತ್ತು. ಕರಾವಳಿ ಉತ್ಸವ ಸಪ್ತಾಹದ ಮೊದಲ ದಿನ ಸಂಗೀತ ಕಾರ್ಯಕ್ರಮ ನೀಡಿದ ಬಾಲಿವುಡ್ ಗಾಯಕ ಶಂಕರ ಮಹಾದೇವನ್ ಎರಡು ತಾಸು ಸಂಗೀತ ಸುಧೆ ಹರಿಸಿದರು. ಸುಮಧುರ ಕಂಠಕ್ಕೆ ಮನಸೋತ ಜನರು ಚಳಿ ಮರೆತು ಕಾರ್ಯಕ್ರಮ ಮುಗಿಯುವವರೆಗೂ ಕುಳಿತರು....
ಸುದ್ದಿ

ನೀರು ಎಂದು ಭಾವಿಸಿ ‘ಥಿನ್ನರ್’ ಕುಡಿದು 3 ವರ್ಷದ ಬಾಲಕಿ ದಾರುಣ ಸಾವು.! – ಕಹಳೆ ನ್ಯೂಸ್

ಕೋಲಾರ : ನೀರು ಎಂದು ಭಾವಿಸಿ ಪೇಂಟ್ ಗೆ ಬಳಸುವ ಥಿನ್ನರ್ ಕುಡಿದು 3 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನ ಜಾನ್ವಿ ಅಲಿಯಾಸ್ ಜಾನು (3) ಎಂದು ಗುರುತಿಸಲಾಗಿದೆ. ಕುಡಿಯುವ ನೀರು ಎಂದು ಬಾವಿಸಿ ಬಾಲಕಿ ಥಿನ್ನರ್ ಕುಡಿದಿದ್ದಳು. ಅಸ್ವಸ್ಥಗೊಂಡಿದ್ದ ಬಾಲಕಿಯನ್ನ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಜಾನ್ವಿ ಅಲಿಯಾಸ್ ಜಾನು ಇಂದು...
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರಿನ ಮಹಿಳೆಯಿಂದ ಅಯೋಧ್ಯೆಗೆ ₹2.5 ಕೋಟಿ ಬೆಲೆಯ ಶ್ರೀರಾಮನ ಚಿನ್ನದ ಕಲಾಕೃತಿ ಅರ್ಪಣೆ – ಕಹಳೆ ನ್ಯೂಸ್

ಬೆಂಗಳೂರಿನ ಮಹಿಳೆಯೊಬ್ಬರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭವ್ಯವಾದ ಬಾಲ ರಾಮನ ಕಲಾಕೃತಿಯನ್ನು ಅರ್ಪಿಸಿದ್ದಾರೆ. ಅಯೋಧ್ಯೆಯ ರಾಮಲಲ್ಲಾ ದೇವಾಲಯ ಆವರಣದಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಗಳಿಂದ ಕೂಡಿದ ಈ ಭವ್ಯವಾದ ಪ್ರತಿಮೆಯ ಪ್ರತಿಷ್ಠಾಪನೆ ನೆರವೇರಲಿದೆ. ವಜ್ರಗಳು, ಪಚ್ಚೆಗಳು ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 12 ಅಡಿ ಎತ್ತರ 8 ಅಡಿ ಅಗಲ ಅಳತೆ ಮತ್ತು ಸುಮಾರು 800 ಕಿಲೋಗ್ರಾಂಗಳಷ್ಟು ತೂಕದ ಈ ಪ್ರತಿಮೆ ಕರ್ನಾಟಕದಿಂದ ಅಯೋಧ್ಯೆ ತಲುಪಿದೆ. ಇದರ ಅಂದಾಜು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಹಾಗೂ ಹಸಿರುದಳ ಮಂಗಳೂರು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ : ಪ್ರಾಥಮಿಕ ಹಂತದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಜೀವನದಲ್ಲಿ ಮೂಡಿಸಿಕೊಂಡಾಗ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಲು ಸಾಧ್ಯ.. ಚಂದ್ರಶೇಖರ್ ಚೆಂಡೆ – ಕಹಳೆ ನ್ಯೂಸ್

ಕಲ್ಲಡ್ಕ : ಜೀವನದಲ್ಲಿ ಸ್ವಚ್ಛತೆಯು ಬಹಳ ಮುಖ್ಯವಾದದ್ದು, ವೈಯಕ್ತಿಕ ಸ್ವಚ್ಛತೆಯ ಮೂಲಕ ತಮ್ಮ ಪರಿಸರವನ್ನು ಸ್ವಚ್ಛಗೊಳಿಸುವುದು ವಿದ್ಯಾರ್ಥಿಗಳ ಜೀವನದಲ್ಲಿ ಹಾಸುಹೊಕ್ಕಾಗಿ ಇರಬೇಕು. ಪ್ರಾಥಮಿಕ ಹಂತದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಜೀವನದಲ್ಲಿ ಮೂಡಿಸಿಕೊಂಡಾಗ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಎಂದು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಗೆ ಹೇಳಿದರು. ಅವರು ಡಿಸೆಂಬರ್ 23 ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ...
1 109 110 111 112 113 3,298
Page 111 of 3298