ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟ ಡಾಲಿ ಧನಂಜಯ್, ಧನ್ಯತಾ : ಫೆ.16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಮದುವೆ – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ನಿಶ್ಚಿತಾರ್ಥ ಕಾರ್ಯಕ್ರಮ ಇಂದು(ನ.17) ನಡೆಯಿತು. ಅರಸಿಕೆರೆ ತಾಲೂಕು ಕಾಳೇನಹಳ್ಳಿಯಲ್ಲಿರುವ ಧನಂಜಯ್ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಮೈಸೂರಿನಲ್ಲಿ ಫೆ.16 ರಂದು ಮದುವೆ ಕಾರ್ಯಕ್ರಮ ನಡೆಯಲಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದರು. ಭಾವಿ ಪತ್ನಿ ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಜೊತೆಗಿನ ಸುಂದರವಾದ ವಿಡಿಯೋ ಹಂಚಿಕೊಳ್ಳುವ ಮೂಲಕ ಮದುವೆ ಸುದ್ದಿಯನ್ನು ಹಂಚಿಕೊAಡಿದ್ದರು. ಡಾಲಿ ಮತ್ತು ಧನ್ಯತಾ...







