ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಪ್ರಕಾಶ್ ತೂಮಿನಾಡು ಈಗ ಕರುನಾಡೇ ಕೊಂಡಾಡುವ ಅದ್ಭುತ ಕಲಾವಿದ – ಕಹಳೆ ನ್ಯೂಸ್
ಅವರು ರಿಕ್ಷಾ ಡ್ರೈವರ್ ಆಗಿ ತಮ್ಮ ಜೀವನದ ರಥ ಸಾರಥಿಯನ್ನು ಸಾಗಿಸುತ್ತಿದ್ದವರು. ಜೊತೆಗೆ ಫ್ಲೈವುಡ್ ಫ್ಯಾಕ್ಟರಿಯಲ್ಲಿ, ಫರ್ನೀಚರ್ ಅಂಗಡಿಯಲ್ಲಿ ಹಾಗೂ ಗಾರೆ ಕೆಲಸ ಜೊತೆಗೆ ಸಾಕಷ್ಟು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದವರು. ಆದ್ರೆ ಈಗ ಕರ್ನಾಟಕವೇ ಹೆಮ್ಮೆ ಪಡುವಂತಹ ಕೊಂಡಾಡುವಂತಹ ಖ್ಯಾತ ಕಲಾವಿದ. ಅವರೇ ಪ್ರಕಾಶ್ ತೂಮಿನಾಡು ಎಂಬ ಅದ್ಭುತ ಕಲಾವಿದ. ಹೌದು. ಪ್ರಕಾಶ್ ತೂಮಿನಾಡು ಅವರು ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ಪೋಷಕ ಹಾಗೂ...







