ವಿದೇಶಿ ಬಾತುಕೋಳಿ ಸಾಕಿದ ಆರೋಪ : ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಕೋರ್ಟ್’ನಿಂದ ಸಮನ್ಸ್ ಜಾರಿ.! -ಕಹಳೆ ನ್ಯೂಸ್
ಬೆಂಗಳೂರು/ಮೈಸೂರು: ಕಾನೂನು ಬಾಹಿರವಾಗಿ ವಿದೇಶಿ ಬಾತುಕೋಳಿಗಳನ್ನು ಸಾಕಿದ್ದಕ್ಕೆ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ವಿರುದ್ಧ ದೂರು ದಾಖಲಾಗಿದ್ದು ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ನಿಷೇಧಿತ ಬಾತುಕೋಳಿಗಳನ್ನ ಕೂಡಿಹಾಕಿದ ಆರೋಪದ ಆಡಿ ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್, ವಿಜಯಲಕ್ಷ್ಮಿ, ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಟಿ.ನರಸೀಪುರದ ಸಿವಿಲ್ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದರು. ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿಯ ವಿಜಯಲಕ್ಷ್ಮೀ ಮಾಲೀಕತ್ವದ ಜಾಗದಲ್ಲಿರುವ ತೂಗುದೀಪ ಫಾರಂ ಹೌಸ್ನಲ್ಲಿ ಅಕ್ರಮವಾಗಿ...







