ಬೆಂಗಳೂರಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯನ್ನು ಕೊಂದು ಮಾಂಗಲ್ಯ ಸರ ದೋಚಿದ ದುಷ್ಕರ್ಮಿಗಳು – ಕಹಳೆ ನ್ಯೂಸ್
ಬೆಂಗಳೂರು,ನ - ಹಾಡಹಗಲೇ ಮನೆಗೆ ನುಗ್ಗಿದ ಹಂತಕರು ಕುತ್ತಿಗೆ ಹಿಸುಕಿ ವೃದ್ಧೆಯನ್ನು ಕೊಲೆ ಮಾಡಿ 45 ಗ್ರಾಂ ಮಾಂಗಲ್ಯ ಸರ ದೋಚಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಉತ್ತರಹಳ್ಳಿಯ ನ್ಯೂಮಿಲಿನಿಯಂ ಶಾಲೆ ರಸ್ತೆಯ ನಿವಾಸಿ ಲಕ್ಷ್ಮೀ (65) ಕೊಲೆಯಾದ ವೃದ್ಧೆ. ಉತ್ತರಹಳ್ಳಿಯಲ್ಲಿ ಅಶ್ವತ್ನಾರಾಯಣ ಹಾಗೂ ಲಕ್ಷ್ಮೀ ದಂಪತಿ ವಾಸವಾಗಿದ್ದು ಅಗರಬತ್ತಿ ಕಾರ್ಖಾನೆಯಲ್ಲಿ ಪತಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಅಶ್ವತ್ನಾರಾಯಣ ಅವರು ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಲಕ್ಷ್ಮೀ ಒಬ್ಬರೇ...







