ಒಂದೇ ದಿನದಲ್ಲಿ 550 ಕ್ಕೂ ಅಧಿಕ ಇಂಡಿಗೋ ವಿಮಾನ ರದ್ದು! ರೊಚ್ಚಿಗೆದ್ದ ಪ್ರಯಾಣಿಕರು-ಕಹಳೆ ನ್ಯೂಸ್
ನವದೆಹಲಿ: ಅಯ್ಯಯ್ಯೋ ವಿಮಾನ ಪ್ರಯಾಣಿಕರ ಸಮಸ್ಯೆ ಕೇಳೋರು ಯಾರು? ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ಅಂದರೆ ಅದು ವಿಮಾನ ರದ್ದು. ಅದರಲ್ಲೂ ಭಾರತೀಯ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ವಿಮಾನಗಳು ಭಾರೀ ಸುದ್ದಿಯಲ್ಲಿದೆ. ಒಂದೇ ದಿನ ಬೆಂಗಳೂರು ಸೇರಿ ದೇಶದ ಹಲವೆಡೆ ಇಂಡಿಗೋ 550ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇಂಡಿಗೋ ಆರಂಭವಾಗಿ 20 ವರ್ಷವಾದರೂ, ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ...







