ಹುಟ್ಟೂರು ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಶಕ್ತಿ ಪ್ರದರ್ಶನ – ಚುನಾವಣಾ ಪ್ರಚಾರ ಸಭೆಯಲ್ಲಿ ಬಿರುಸಿನ ಭಾಷಣ – ಕಹಳೆ ನ್ಯೂಸ್
ಪುತ್ತೂರು: ಹುಟ್ಟೂರು ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಚುನಾವಣಾ ಪ್ರಚಾರ ಸಭೆ ನಡೆಸಿದರು. ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಮಾತನಾಡಿದ ಅಶೋಕ್ ರೈಯವರು ನಾನು ಕೋಡಿಂಬಾಡಿಯ ಹುಡುಗ, ಹತ್ತೂರಲ್ಲಿ ನಾಲ್ಕು ಅಕ್ಷರ ಕಲಿಸಿದ ಸಂಜೀವ ರೈಯವರ ಪುತ್ರ ಈ ಸಲ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು ನಿಮ್ಮೆಲ್ಲರ ಆಶೀರ್ವಾದವನ್ನು ಬೇಡುತ್ತಿದ್ದೇನೆ, ನೀವು ನನ್ನನ್ನು ಮನೆಮಗನಾಗಿ ಸ್ವೀಕರಿಸಿ ಆಶೀರ್ವಾದ ಮಾಡುತ್ತೀರಿ ಎಂಬ ಪೂರ್ಣ ನಂಬಿಕೆ ನನ್ನಲ್ಲಿದೆ. ಹುಟ್ಟೂರಿನ ಸಹೋದರ, ಸಹೋದರಿಯರು, ಬಂಧುಗಳು...






