Thursday, March 19, 2026

ರಾಜ್ಯ

ಬೆಂಗಳೂರುರಾಜ್ಯಶಿಕ್ಷಣಸುದ್ದಿ

ಇಂದು ಪಿಯುಸಿ ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ – ಕಹಳೆ ನ್ಯೂಸ್

ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (Second PU Result) ಪ್ರಕಟಗೊಂಡಿದ್ದು, ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು ಮಕ್ಕಳ ಪೈಕಿ ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, 11 ಗಂಟೆಗೆ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಮತ್ತು pue.kar.nic ಮೂಲಕ...
ದೆಹಲಿಬೆಂಗಳೂರುರಾಜ್ಯಶಿಕ್ಷಣಸುದ್ದಿ

5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ ಫಲಿತಾಂಶ’ಕ್ಕೆ ಸುಪ್ರೀಂಕೋರ್ಟ್ ತಡೆ- ಕಹಳೆ ನ್ಯೂಸ್

ನವದೆಹಲಿ: ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಗೆ (ಕೆಎಸ್‌ಇಎಬಿ) ಸಂಯೋಜಿತವಾಗಿರುವ ಶಾಲೆಗಳ 5,8, 9 ಮತ್ತು 11 ನೇ ತರಗತಿಗಳಿಗೆ "ಬೋರ್ಡ್ ಪರೀಕ್ಷೆಗಳನ್ನು" ನಡೆಸುವುದನ್ನು ಎತ್ತಿಹಿಡಿದ ಹೈಕೋರ್ಟ್ ಆದೇಶ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ನ್ಯಾಯಪೀಠವು ಕಳೆದ ತಿಂಗಳು ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ಪುನರಾರಂಭಗೊಂಡ ಈ ಪರೀಕ್ಷೆಗಳ ಯಾವುದೇ ಫಲಿತಾಂಶಗಳನ್ನು ಘೋಷಿಸುವುದನ್ನು ತಡೆಹಿಡಿದಿದೆ. ಈ ವಿಷಯದಲ್ಲಿ ಹೈಕೋರ್ಟ್ ಮಾರ್ಚ್...
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರು: ಯುಗಾದಿ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ 2000ಕ್ಕೂ ಹೆಚ್ಚುವರಿ ಬಸ್ ವ್ಯವಸ್ಥೆ- ಕಹಳೆ ನ್ಯೂಸ್

ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳು ವಿಶೇಷ ಬಸ್‌ಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಏ. 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ,...
ಕ್ರೀಡೆರಾಜ್ಯಸುದ್ದಿ

ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕಗೆ ತವರೂರಲ್ಲಿ ಅದ್ದೂರಿ ಸ್ವಾಗತ – ಕಹಳೆ ನ್ಯೂಸ್

ಕಲಬುರಗಿ : ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ ಅವರನ್ನು ಸ್ವಗ್ರಾಮ ಕೋಳಕೂರಿನಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಶ್ರೇಯಾಂಕ ಮೂಲತಃ ಕಲಬುರಗಿ ಜಿಲ್ಲೆಯ ಕೋಳಕೂರ ಗ್ರಾಮದವರು. ತವರಿಗೆ ಬಂದ ಅವರನ್ನು ಗ್ರಾಮದ ಹೊರವಲಯದಿಂದ ಸಿದ್ಧಬಸವೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆ ಬಳಿಕ ಶ್ರೇಯಾಂಕ ಪಾಟೀಲ ಸಿದ್ಧಬಸವೇಶ್ವರರ ದರ್ಶನ ಪಡೆದರು. ಮೆರವಣಿಗೆಯಲ್ಲಿ ಕೋಳಕೂರ ಗ್ರಾಮದ...
ಕೊಡಗುಮೈಸೂರುರಾಜಕೀಯರಾಜ್ಯಸುದ್ದಿ

ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣರಾಜ ಒಡೆಯರ್ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ಮೈಸೂರು-ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣರಾಜ ಒಡೆಯರ್ ಅವರು ಇಂದು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು....
ರಾಜ್ಯವಾಣಿಜ್ಯಸುದ್ದಿ

ಹೊಸ ಅಬಕಾರಿ ನೀತಿ ಜಾರಿಗೆ : ಇಂದಿನಿಂದ ದೇಶಾದ್ಯಂತ ಮದ್ಯದ ಬೆಲೆಯಲ್ಲಿ ಏರಿಕೆ – ಕಹಳೆ ನ್ಯೂಸ್

ನವದೆಹಲಿ : ಮದ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇಂದಿನಿಂದ ದೇಶಾದ್ಯಂತ ಮದ್ಯ ಬೆಲೆಯಲ್ಲಿ ಏರಿಕೆಯಾಗಿದೆ. ಏಕೆಂದರೆ ಇಂದಿನಿಂದ ಹೊಸ ಅಬಕಾರಿ ನೀತಿಯನ್ನು ಸಹ ಜಾರಿಗೆ ತರಲಾಗಿದೆ. ಇದು ಎಲ್ಲಾ ಮೂರು ರೀತಿಯ ಮದ್ಯ, ಬಿಯರ್, ದೇಶೀಯ ಮತ್ತು ಇಂಗ್ಲಿಷ್ ಬೆಲೆಗಳನ್ನು ಹೆಚ್ಚಿಸಿದೆ. ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳು ಮದ್ಯದ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಮದ್ಯ ಗುತ್ತಿಗೆದಾರರಿಗೂ ಅಧಿಸೂಚನೆ ಕಳುಹಿಸಲಾಗಿದೆ. ಹೊಸ ದರಗಳು ಇಂದಿನಿಂದಲೇ...
ದೆಹಲಿರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ಏ.1ರಿಂದ 2,000 ರೂ. ನೋಟು ವಿನಿಮಯ / ಠೇವಣಿ ತಾತ್ಕಾಲಿಕ ಸ್ಥಗಿತ ಆರ್.ಬಿ.ಐ ಘೋಷಣೆ – ಕಹಳೆ ನ್ಯೂಸ್

ನವದೆಹಲಿ: ದೇಶಾದ್ಯಂತ ಏ.1ರಿಂದ ತನ್ನ 19 ವಿತರಣಾ ಕಚೇರಿಗಳಲ್ಲಿ 2,000 ರೂ.ಗಳ ನೋಟುಗಳ ವಿನಿಮಯ ಅಥವಾ ಠೇವಣಿ ಸಾಧ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಖಾತೆಗಳ ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ ಈ ತಾತ್ಕಾಲಿಕ ನಿಲುಗಡೆಯಾಗಿದೆ. ಎಂದು ಮಾಹಿತಿ ನೀಡಿದೆ. ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ 2,000 ರೂ.ಗಳ ನೋಟುಗಳ ವಿನಿಮಯ / ಠೇವಣಿ ಸೌಲಭ್ಯವು ಏ.1ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 19 ವಿತರಣಾ ಕಚೇರಿಗಳಲ್ಲಿ...
ಕ್ರೈಮ್ಬೆಂಗಳೂರುರಾಜಕೀಯರಾಜ್ಯಸುದ್ದಿ

ಬಿಜೆಪಿ ವಿರುದ್ಧ 40% ಕಮಿಷನ್‌ ಜಾಹೀರಾತು : ಏಪ್ರಿಲ್ 29 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿಗೆ ಕೋರ್ಟ್ ಸಮನ್ಸ್‌ ; ಜೂನ್ 1ರಂದು ರಾಹುಲ್ ಗಾಂಧಿ ಹಾಜರಾಗಬೇಕು, ನ್ಯಾಯಾಲಯ ಖಡಕ್ ಸೂಚನೆ – ಕಹಳೆ ನ್ಯೂಸ್

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಕಾನೂನು ಕ್ರಮ ಕೈಗೊಂಡಿತ್ತು. ಪಕ್ಷದ ಪರವಾಗಿ ವಕೀಲ ವಿನೋದ್ ಕುಮಾರ್ ಅವರು ಪ್ರಾರಂಭಿಸಿದ ಈ ಪ್ರಕರಣವು ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಪ್ರಮಾಣ ಮತ್ತು ಜಾಹೀರಾತು ಸಮಸ್ಯೆಗಳ...
1 136 137 138 139 140 274
Page 138 of 274