ಡಿವಿ ಸದಾನಂದ ಗೌಡ ಬಣ್ಣ ಬಯಲು ಮಾಡ್ತೀನಿ, ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ : ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ – ಕಹಳೆ ನ್ಯೂಸ್
ವಿಜಯಪುರ : ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದೀರಿ, ನಿಮ್ಮ ಬಣ್ಣ ಬಯಲು ಮಾಡ್ತೀನಿ, ಇಲ್ಲವಾದರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ ಎಂದು ಡಿವಿಎಸ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಎಸೆದಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೆ ಹೋದರೆ ಬಂಡವಾಳ ಬಯಲು ಮಾಡುತ್ತೇನೆ. ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ. ಸದಾನಂದಗೌಡ ಯಾಕೆ ಗಾಬರಿಯಾಗಬೇಕು? ನೀವು ಗಾಬರಿಯಾಗಬೇಡಿ. ನಾಗರಹಾವು-ಎರೆಹುಳ ಎತ್ತನಿಂದೆತ್ತ ಸಂಬಂಧವಯ್ಯ ಸದಾನಂದ....






