ವಿಶ್ವಕಪ್‍ನಿಂದ ಹೊರಬಿದ್ದ ಟೀಮ್ ಭಾರತ; ಫೈನಲ್ ಗೆ ನ್ಯೂಝಿಲ್ಯಾಂಡ್ ಎಂಟ್ರಿ – ಕಹಳೆ ನ್ಯೂಸ್
ಮ್ಯಾಂಚೆಸ್ಟರ್ : ಎರಡು ಬಾರಿಯ ವಿಶ್ವಕಪ್ ವಿಜೇತ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ವಿಶ್ವಕಪ್‍ನಿಂದ ಹೊರ ನಡೆದಿದೆ. ಈ ಮೂಲಕ 2019ರ ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಕೊಹ್ಲಿ ಪಡೆಯು ಸೆಮಿಫೈನಲ್ ನಲ್ಲಿ ಸೋಲಿನ ರುಚಿ ಅನುಭವಿಸಿತು. ಜಡೇಜ ಹಾಗೂ ಧೋನಿಯ ಸಾಹಸದಿಂದ ರೋಚಕ ಘಟ್ಟ ತಲುಪಿದ್ದ ಪಂದ್ಯವು ಕೊನೆ ಕ್ಷಣದಲ್ಲಿ ಕೈ ಜಾರಿದ್ದು, ನ್ಯೂಝಿಲ್ಯಾಂಡ್ ಫೈನಲ್ ತಲುಪಿದೆ. ಭಾರತದ ಪರ ಜಡೇಜ(77)...







