ಉಕ್ರೇನ್ ನಿಂದ ಸ್ವದೇಶಕ್ಕೆ ಆಗಮಿಸಿದ 242 ಭಾರತೀಯರು – ಕಹಳೆ ನ್ಯೂಸ್
ನವದೆಹಲಿ: ಯುದ್ದ ಸ್ಫೋಟದ ಭೀತಿಯಲ್ಲಿರುವ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ಏರ್ ಲಿಫ್ಟ್ ಗೆ ಭಾರತ ಚಾಲನೆ ನೀಡಿದೆ. ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ 242 ಭಾರತೀಯರು ಸ್ವದೇಶಕ್ಕೆ ಆಗಮಿಸಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡ ರಾತ್ರಿ ವಿಮಾನ ಬಂದಿಳಿದಿದೆ. ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಹಿಂತಿರುಗಿದ್ದಾರೆ. ಸ್ವದೇಶಕ್ಕೆ ಮರಳಿರುವುದು ತುಂಬಾ ಸಂತೋಷವಾಗಿದೆ. ಪರಿಸ್ಥಿತಿ ಅತ್ಯಂತ ಉದ್ವಿಗ್ನತೆಯಿಂದ ಕೂಡಿದೆ ಎಂದು...







