Recent Posts

Saturday, April 25, 2026
ಅಂತಾರಾಷ್ಟ್ರೀಯ

ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಮಾಜಿ ಮಿಸ್ ಯುಎಸ್‍ಎ – ಕಹಳೆ ನ್ಯೂಸ್

ನ್ಯೂಯಾರ್ಕ್: ಮಾಜಿ ಮಿಸ್ ಅಮೆರಿಕ ಮಾಡೆಲ್ ಚೆಸ್ಲಿ ಕ್ರಿಸ್ಟ್ ಜೀವನದಲ್ಲಿ ಜಿಗುಪ್ಸೆಗೊಂಡು ನ್ಯೂಯಾರ್ಕ್‍ನ ಮ್ಯಾನ್ ಹ್ಯಾಟನ್ ಪ್ರದೇಶದ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಚೆಸ್ಲಿ ನಿಧನದಿಂದ ನಮಗೆ ತೀವ್ರ ಆಘಾತವಾಗಿದೆ‘ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

30 ವರ್ಷದ ಈ ಮಾಡೆಲ್ 2019 ರಲ್ಲಿ ಮಿಸ್ ಯುಎಸ್‍ಎ ಪಟ್ಟ ಗೆದ್ದಿದ್ದರು. ಅಮೆರಿಕದ ಮನರಂಜನಾ ಚಾನೆಲ್ ಎಕ್ಸ್ ಟ್ರಾ ಟಿವಿ ನಿರೂಪಕಿಯಾಗಿ ಗಮನ ಸೆಳೆದಿದ್ದ ಮೊಡೆಲ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ “ಈ ದಿನ ನಿಮ್ಮ ಬಾಳಿನಲ್ಲಿ ಶಾಂತಿ ನೆಮ್ಮದಿ ತರಬಹುದು” ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಚೆಸ್ಲಿ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ.