ಹಿಂದೂ ರಾಷ್ಟ್ರದ ಧ್ವನಿಯನ್ನು ಮೊಳಗಿಸಲು ಆನ್ಲೈನ್ ಹಿಂದೂ ರಾಷ್ಟ್ರ-ಜಾಗೃತಿ ಸಭೆ !-ಕಹಳೆ ನ್ಯೂಸ್
ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಗಲಿರುಳು ಕಾರ್ಯ ಮಾಡುತ್ತಿದೆ. ಧರ್ಮಶಿಕ್ಷಣ, ಧರ್ಮಜಾಗೃತಿ, ಧರ್ಮರಕ್ಷಣೆ, ರಾಷ್ಟ್ರರಕ್ಷಣೆ ಮತ್ತು ಹಿಂದೂ ಸಂಘಟನೆ ಇವು ಸಮಿತಿಯ ಕಾರ್ಯದ ಪಂಚಸೂತ್ರಗಳಾಗಿವೆ. ಇದಕ್ಕಾಗಿ ಸಮಿತಿಯ ವತಿಯಿಂದ ಅಧಿವೇಶನ, ಧರ್ಮಶಿಕ್ಷಣವರ್ಗ, ವ್ಯಾಖ್ಯಾನಗಳು, ಆಂದೋಲನಗಳು, ಸಭೆ ಇತ್ಯಾದಿ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಸಮಿತಿಯ ಉಪಕ್ರಮಗಳ ಹಿಂದಿನ ಮೈಲುಗಲ್ಲು ಎಂದು ಹೇಳಬಹುದು. ಸಮಿತಿಯ ವತಿಯಿಂದ ದೇಶದಾದ್ಯಂತ ಇಷ್ಟರವರೆಗೆ 1896 ಸಭೆಗಳನ್ನು ಆಯೋಜಿಸಲಾಗಿದ್ದು ಅದರ ಮೂಲಕ ಧರ್ಮಾಚರಣಿ...







