ಹಳ್ಳದಲ್ಲಿ ತೇಲಿಬಂದ 7 ಭ್ರೂಣಗಳ ಶವ ಕಂಡು ಬೆಚ್ಚಿಬಿದ್ದ ಬೆಳಗಾವಿ ಜನತೆ – ಕಹಳೆ ನ್ಯೂಸ್
ಬೆಳಗಾವಿ; ಡಬ್ಬಿಯಲ್ಲಿ ತುಂಬಿದ 7 ಭ್ರೂಣಗಳ ಶವ ಹಳ್ಳದಲ್ಲಿ ತೇಲಿಬಂದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದ್ದು, ಭ್ರೂಣದ ಶವ ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಬೆಳಗಾವಿ ಡಿಎಚ್ ಒ ಮಾತನಾಡಿ ಎಲ್ಲವೂ “ಐದು ತಿಂಗಳ ಭ್ರೂಣವಾಗಿದೆ. ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ. ಕೇಸ್ ದಾಖಲಾದ ಬಳಿಕ ಶವಗಳನ್ನು ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು. ಘಟನೆಯ ಬಗ್ಗೆ ಸಮಗ್ರ...







