ಅಶ್ವತ್ಥ ಎಲೆಯಲ್ಲಿ ಮೂಡಿದ ಮೋದಿ: ಮೋಡಿಯಾದ ಪ್ರಧಾನಿಯಿಂದ ಟ್ವೀಟ್! – ಕಹಳೆ ನ್ಯೂಸ್
ಮಂಗಳೂರು: ಕಲಾವಿದರೋರ್ವರು ಅಶ್ವತ್ಥ ಎಲೆಯಲ್ಲಿ ಕಲಾತ್ಮಕವಾಗಿ ಕತ್ತರಿಸಿ ಪ್ರಧಾನಿ ಮೋದಿಯವರ ಚಿತ್ರ ರಚಿಸಿದ್ದರು. ಈ ಚಿತ್ರ ಮೋದಿಯವರನ್ನೇ ಮೋಡಿ ಮಾಡಿದ್ದು, ಸ್ವತಃ ಅವರೇ ಚಿತ್ರವನ್ನು ಮೆಚ್ಚಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಳ್ಯ ತಾಲೂಕಿನ ಅಡ್ಕರ್ ಎಂಬಲ್ಲಿನ ಕಲಾವಿದ ಶಶಿ ಅಡ್ಕಾರ್ ಎಂಬುವರು ನಿನ್ನೆ ಒಂದೂವರೆ ತಾಸು ಪ್ರಯತ್ನ ಪಟ್ಟು, ಅಶ್ವತ್ಥ ಎಲೆಯ ಮೇಲೆ ಮೋದಿ ಅವರ ಚಿತ್ರ ಬಿಡಿಸಿದ್ದರು. ಮೊದಲಿಗೆ ಅಶ್ವತ್ಥ ಎಲೆಯಲ್ಲಿ ಮೋದಿಯವರ ಸ್ಕೆಚ್ ಬಿಡಿಸಿ, ಬ್ಲೇಡ್ನಿಂದ...







