Thursday, March 12, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಹಬ್ಬದ ಹೊತ್ತಲ್ಲೇ ಮೋದಿ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ-ಕಹಳೆ ನ್ಯೂಸ್

ನವದೆಹಲಿ: ಕುಸಿದ ಆರ್ಥಿಕತೆ ಚೇತರಿಕೆಗೆ ಪ್ರಧಾನಿ ಮೋದಿ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದು ಶೀಘ್ರವೇ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ವಾರ ದೀಪಾವಳಿ ಬೋನಸ್ ಕೈಸೇರಲಿದೆ. ಕೊರೋನಾ ಬಿಕ್ಕಟ್ಟಿನ ನಡುವೆಯೇ ಕೇಂದ್ರದಿಂದ ಬೋನಸ್ ಘೋಷಣೆ ಮಾಡಲಾಗಿದೆ. ಆರ್ಥಿಕ ಚೇತರಿಕೆ ಉದ್ದೇಶದಿಂದ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಲು ಮೋದಿ ಚಿಂತನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಪೂರ್ವಸಿದ್ಧತೆ ಕೈಗೊಂಡಿದ್ದು ದಸರಾ, ದೀಪಾವಳಿ...
ಹೆಚ್ಚಿನ ಸುದ್ದಿ

ರಾಜ್ಯದಲ್ಲಿ ‘ಆನ್ ಲೈನ್ ಶಿಕ್ಷಣ’ದಿಂದ ವಿದ್ಯಾರ್ಥಿಗಳ ಕಣ್ಣಿಗೆ ತೊಂದರೆ : ಇಂದೇ ‘ಮಾರ್ಗಸೂಚಿ’ ರಿಲೀಸ್ – ಸಚಿವ ಸುರೇಶ್ ಕುಮಾರ್-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದಾಗಿ ಆನ್ ಲೈನ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಕಲಿಕೆ ಮುಂದುವರೆಸಲಾಗಿದೆ. ಆದ್ರೇ ವಿದ್ಯಾರ್ಥಿಗಳು ಆನ್ ಲೈನ್ ತರಗತಿಗೆ ಹಾಜರಾಗುತ್ತಿರುವುದರಿಂದ ಅವರುಗಳು ಕಣ್ಣಿನ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ತಜ್ಞರು ನೀಡಿರುವ ವರದಿ ಹಾಗೂ ಸಲಹೆಗಳ ಆಧಾರ ಮೇಲೆ, ಸರ್ಕಾರ ಇಂದೇ ಆನ್ ಲೈನ್ ಶಿಕ್ಷಣದ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ....
ಹೆಚ್ಚಿನ ಸುದ್ದಿ

ಬಜಾಜ್ ಫೈನಾನ್ಸ್ ಲಾಭ 965 ಕೋಟಿ ರೂಪಾಯಿಗೆ ಕುಸಿತ -ಕಹಳೆ ನ್ಯೂಸ್

ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬಜಾಜ್ ಫೈನಾನ್ಸ್ ನಿವ್ವಳ ಲಾಭದಲ್ಲಿ ಇಳಿಕೆ ಆಗಿದೆ. ಈ ಬಗ್ಗೆ ಕಂಪೆನಿ ಬುಧವಾರ ಘೋಷಣೆ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬಜಾಜ್ ಫೈನಾನ್ಸ್ 1506 ಕೋಟಿ ರೂಪಾಯಿ ಲಾಭ ಮಾಡಿತ್ತು. ಈ ಬಾರಿ ಅದು 965 ಕೋಟಿ ರೂಪಾಯಿಗೆ ಕುಸಿದಿದೆ. ಸಾಲದ ಮೇಲೆ ನಷ್ಟ ಹಾಗೂ FY21 Q2ಗೆ ಪ್ರಾವಿಷನ್ 1700 ಕೋಟಿ ಇಡಲಾಗಿದೆ. FY20 Q2ನಲ್ಲಿ 594 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಬಜಾಜ್...
ಹೆಚ್ಚಿನ ಸುದ್ದಿ

RBIನಿಂದ 8 ವರ್ಷಗಳ ನಂತ್ರ ‘ಎಟಿಎಂ ವಿತ್ ಡ್ರಾ ನಿಯಮ’ದಲ್ಲಿ ಬದಲಾವಣೆ – ಕಹಳೆ ನ್ಯೂಸ್

ನವದೆಹಲಿ : ಈಗಾಗಲೇ ಗ್ರಾಹಕರ ಸ್ನೇಹಿ ನಿಯಮಗಳನ್ನು ರೂಪಿಸಿರುವಂತ ಭಾರತೀಯ ರಿಸರ್ವ್ ಬ್ಯಾಂಕ್, ಮತ್ತೊಂದು ಮಹತ್ವದ ಬದಲಾವಣೆಯನ್ನು 8 ವರ್ಷಗಳ ಬಳಿಕ ಮಾಡಲು ಹೊರಟಿದೆ. ಎಟಿಎಂ ವಿತ್ ಡ್ರಾ ಮೇಲಿನ ವರ್ಗಾವಣೆ ನಿಯಮದಲ್ಲಿ ಬದಲಾವಣೆ ತರಲು ಹೊರಟಿದ್ದು, ಬ್ಯಾಂಕ್ ಗ್ರಾಹಕರು 5000 ಸಾವಿರಕ್ಕಿಂತ ಹೆಚ್ಚು ಹಣ ಡ್ರಾಮಾಡಿಕೊಂಡಾಗ ವಿಧಿಸಲಾಗುತ್ತಿದ್ದಂತ ಶುಲ್ಕದಿಂದ ವಿನಾಯಿತಿ ನೀಡುವ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದೆ. ಈ ಮೂಲಕ ಎಟಿಎಂ ಬಳಕೆದಾರರಿಗೆ ಗುಡ್ ನ್ಯೂಸ್ ಸದ್ಯದಲ್ಲಿಯೇ ನೀಡಲಿದೆ. ಎಟಿಎಂನಿಂದ...
ಹೆಚ್ಚಿನ ಸುದ್ದಿ

ಪೊಲೀಸರ ತ್ಯಾಗ,ಸಾಹಸ ಹಾಗೂ ಸೇವೆ ಸದಾ ಸ್ಮರಣೀಯ : ಪ್ರಧಾನಿ ಮೋದಿ-ಕಹಳೆನ್ಯೂಸ್

ನವದೆಹಲಿ: ಪೊಲೀಸ್ ಸಂಸ್ಮರಣಾ ದಿನವನ್ನು ಬುಧವಾರ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪೊಲೀಸರ ಸಾಹಸ ಹಾಗೂ ತ್ಯಾಗವನ್ನು ಕೊಂಡಾಡಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಿಂದ ಹಿಡಿದು ಭಯಾನಕ ಅಪರಾಧ ಪ್ರಕರಣಗಳನ್ನು ಬಗೆಹರಿಸುವವರೆಗೆ, ವಿಪತ್ತು ನಿರ್ವಹಣೆಗೆ ಸಹಾಯ ಮಾಡುವುದರಿಂದ ಹಿಡಿದು ಕೋವಿಡ್-19 ವಿರುದ್ಧ ಹೋರಾಡುವವರೆಗೆ, ಯಾವುದೇ ಹಿಂಜರಿಕೆಯಿಲ್ಲದೆ ನಮ್ಮ ಪೊಲೀಸ್ ಸಿಬ್ಬಂದಿಗಳು ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಜನ ಸೇವೆಯತ್ತ ಅವರ ಸಮರ್ಪಣೆ ಮತ್ತು ಸರ್ವ ಸನ್ನದ್ಧತೆಯ ಬಗ್ಗೆ ನಮಗೆ ಹೆಮ್ಮೆ ಇದೆ...
ಹೆಚ್ಚಿನ ಸುದ್ದಿ

ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸರು ಪಟ್ಟ ಶ್ರಮ ಶ್ಲಾಘನೀಯ : ಸಿಎಂ ಬಿಎಸ್‍ವೈ-ಕಹಳೆನ್ಯೂಸ್

ಬೆಂಗಳೂರು,ಅ.21- ರಾಜ್ಯದಲ್ಲಿ ಕಳೆದ ಆರು ತಿಂಗಳಿನಿಂದ ಮಹಾಮಾರಿ ಕೋವಿಡ್-19 ಸೋಂಕು ನಿಯಂತ್ರಿಸುವಲ್ಲಿ ಮತ್ತು ಲಾಕ್‍ಡೌನ್ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡಿಸುವಲ್ಲಿ ಪೊಲೀಸರು ಪಟ್ಟ ಶ್ರಮ ಶ್ಲಾಘನೀಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಪೊಲೀಸ್ ಸಂಸ್ಮರಣ ದಿನಾಚರಣೆ ಅಂಗವಾಗಿ ಇಂದು ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಉತ್ತರಕರ್ನಾಟಕದ ಭಾಗದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ...
ಹೆಚ್ಚಿನ ಸುದ್ದಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ : ನಳೀನ್ ಕುಮಾರ್ ಕಟೀಲ್-ಕಹಳೆನ್ಯೂಸ್

ಮಸ್ಕಿ: ಜನಾದೇಶಕ್ಕೆ ವಿರುದ್ಧವಾಗಿ ರಾತ್ರೋ ರಾತ್ರಿ ಪ್ರೇಮ ವಿವಾಹ ಮಾಡಿಕೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚನೆ ಮಾಡಿದರು. ಆದರೆ, ಇದು ಸಿದ್ದರಾಮಯ್ಯ ಅವರಿಗೆ ಬೇಕಾಗಿರಲಿಲ್ಲ. ಈ ಸರ್ಕಾರ ಕೆಡವಿದ್ದು ಬಿಜೆಪಿ ಅಲ್ಲ. ಸಿದ್ಧರಾಮಯ್ಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು. ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರಗಳ ಹಾಗೂ ಮುಖಂಡರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 'ಕುಟುಂಬ ಹಾಗೂ ವಂಶಾಡಳಿತ...
ಹೆಚ್ಚಿನ ಸುದ್ದಿ

ಬದಲಾಗಲಿದೆ ಸಿಲಿಂಡರ್ ವಿತರಣೆ ವ್ಯವಸ್ಥೆ – ನವೆಂಬರ್ 1 ರಿಂದಲೇ ಹೊಸ ನಿಯಮ ಜಾರಿ-ಕಹಳೆನ್ಯೂಸ್

ನವದೆಹಲಿ: ನವೆಂಬರ್ ನಿಂದ ಸಿಲಿಂಡರ್ ವಿತರಣೆ ನಿಯಮದಲ್ಲಿ ಬದಲಾವಣೆಯಾಗಲಿದೆ. ಗ್ರಾಹಕರಿಗೆ ಸಿಲಿಂಡರ್ ಗಳನ್ನು ಸಮರ್ಪವಾಗಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 ರಿಂದ ಹೊಸ ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ. ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಯುವ ಉದ್ದೇಶ ಕೂಡ ಇದೆ ಎನ್ನಲಾಗಿದೆ. ಈ ಹೊಸ ವ್ಯವಸ್ಥೆಯನ್ನು ಡಿಎಸಿ ಅಂದರೆ ಡೆಲಿವರಿ ದೃಢೀಕರಣ ಕೋಡ್ ಎಂದು ಕರೆಯಲಾಗುತ್ತಿದೆ. ಸಿಲಿಂಡರ್ ಬುಕ್ ಆದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೋಡ್...
1 157 158 159 160 161 174
Page 159 of 174