Friday, March 13, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ರಾಮ ನವಮಿಯಂದು ಶ್ರೀರಾಮನ ವಿಗ್ರಹದ ಮೇಲೆ ಸೂರ್ಯ ಕಿರಣಗಳು ಸ್ಪರ್ಶಿಸುವಂತೆ ಮಂದಿರ ನಿರ್ಮಾಣವಾಗಲಿ: ಮೋದಿ- ಕಹಳೆ ನ್ಯೂಸ್

ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮಮಂದಿರದ ರಾಮನ ವಿಗ್ರಹದ ಮೇಲೆ ಶ್ರೀರಾಮ ನವಮಿಯ ದಿನ ಸೂರ್ಯನ ಕಿರಣಗಳು ಬೀಳುವಂತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಶ್ರೀರಾಮ ನವಮಿಯಂದು ಭಗವಾನ್ ರಾಮನ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವ ರೀತಿಯಲ್ಲಿ ರಾಮ ಮಂದಿರ ವಿನ್ಯಾಸಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು 15 ಸದಸ್ಯರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ....
ಹೆಚ್ಚಿನ ಸುದ್ದಿ

ಸುರತ್ಕಲ್ : ಪ್ರಿಯತಮೆಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೂವಿನ ವ್ಯಾಪಾರಿ – ಕಹಳೆ ನ್ಯೂಸ್

ಹೂವಿನ ವ್ಯಾಪಾರಿಯೊಬ್ಬ ತನ್ನ ಪ್ರಿಯತಮೆಯನ್ನು ಹತ್ಯೆಗೈದು ತಾನೂ ಅತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ನಲ್ಲಿ ಬುಧವಾರ ನಡೆದಿದೆ. ವಸಂತ್(44) ಕುಳಾಯಿ ನಿವಾಸಿಯಾಗಿದ್ದು ಕಳೆದ ಏಳೆಂಟು ವರ್ಷಗಳಿಂದ ಹೂವು ವ್ಯಾಪಾರ ಮಾಡುತ್ತಿದ್ದ.ಇವನ ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ಸೂರಿಂಜೆಯ ವಿವಾಹಿತ ಮಹಿಳೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಆದರೆ ಬುಧವಾರ ಯಾವುದೋ ವೈಮನಸ್ಸಿನ ಕಾರಣದಿಂದ ಮಹಿಳೆಯನ್ನು ಕೊಂದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ ,ಸುರತ್ಕಲ್...
ಹೆಚ್ಚಿನ ಸುದ್ದಿ

BREAKING NEWS : ಬಿಜೆಪಿ ನಾಯಕಿ, ನಟಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ಕಹಳೆ ನ್ಯೂಸ್

ಚೆನ್ನೈ : ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ತಮಿಳುನಾಡಿನ ಮೇಲ್ ಮರವತ್ತೂರ್ ಸಮೀಪ್ ನಡೆದಿದೆ. ಖುಷ್ಬೂ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ಯಾಂಕರ್ ವೊಂದು ಗುದ್ದಿದೆ. ಅದೃಷ್ಟವಶತ್ ಯಾವುದೇ ಅಪಾಯವಾಗಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೇಲ್ ಮರವತ್ತೂರ್ ಸಮೀಪ ಟ್ಯಾಂಕರ್ ಒಂದು ಖುಷ್ಬೂ ಪ್ರಯಾಣಿಸುತ್ತಿದ್ದ ಕಾರಿಗೆ ಗುದ್ದಿದೆ. ನಿಮ್ಮೆಲ್ಲರ ಅಶೀರ್ವಾದ ಹಾಗೂ ದೇವರಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಡೂರು ಕಡೆಗೆ ನನ್ನ ಪ್ರಯಾಣ ಮುಂದುವರಿಸುತ್ತಿದ್ದೇನೆ ಎಂದು...
ಹೆಚ್ಚಿನ ಸುದ್ದಿ

ವಾಹನ ಮಾಲೀಕರೇ ಗಮನಿಸಿ : ಜನವರಿಯಿಂದ `ಫಾಸ್ಟ್ಯಾಗ್’ ಕಡ್ಡಾಯ-ಕಹಳೆ ನ್ಯೂಸ್

ಈಗಾಗಲೇ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅವಳವಡಿಸಲಾಗಿದೆ. ಇದರ ಜೊತೆಗೆ ಒಂದು ಕಡೆ ಮಾತ್ರ ನಗದು ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ ಇನ್ಮುಂದೆ ಹಾಗಾಗಲ್ಲ. ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗುತ್ತಿದೆ. ಹೌದು, ಜನವರಿಯಿಂದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗುತ್ತಿದ್ದು, ಈ ಮೂಲಕ ಸಂಪೂರ್ಣವಾಗಿ ಟೋಲ್‌ಗಳಲ್ಲಿ ನಗದು ಬಳಕೆಯನ್ನು ನಿಲ್ಲಿಸೋದಿಕ್ಕೆ ಸರ್ಕಾರ ಮುಂದಾಗಿದೆ. ಇಲ್ಲಿಯವರೆಗೂ ಪ್ರತಿಶತ 80 ರಷ್ಟು...
ಹೆಚ್ಚಿನ ಸುದ್ದಿ

ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ದ.ಕ. ಜಿಲ್ಲೆಗೆ ಅವಮಾನ: ಮಿಥುನ್ ರೈ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಗುತ್ತಿಗೆ ನೀಡಿರುವ ಮೋದಿ ನೇತೃತ್ವದ ಕೇಂದ್ರ ಸರಕಾರವು ಈ ನಿಲ್ದಾಣಕ್ಕೆ ಗೌತಮ್ ಅದಾನಿ ಹೆಸರಿಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನ ಮಾಡಿದೆ ಎಂದು ದ.ಕ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರರಾದ ಕೋಟಿ-ಚೆನ್ನಯರ ಹೆಸರಿಡಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ...
ಹೆಚ್ಚಿನ ಸುದ್ದಿ

ರಾಮಾಯಣ, ಮಹಾಭಾರತ ಕೇಳುತ್ತಾ ಬಾಲ್ಯ ಕಳೆದೆ- ಆತ್ಮಚರಿತ್ರೆಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮಾ! – ಕಹಳೆ ನ್ಯೂಸ್

ವಾಷಿಂಗ್ಟನ್: ಹಿಂದೂಗಳ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಕೇಳುತ್ತಾ ಇಂಡೊನೇಷ್ಯಾದಲ್ಲಿ ತನ್ನ ಬಾಲ್ಯವನ್ನು ಕಳೆದರಿಂದ ಭಾರತಕ್ಕೆ ಯಾವಾಗಲೂ ವಿಶೇಷವಾದ ಸ್ಥಾನವಿರುವುದಾಗಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗದಷ್ಟು ಗಾತ್ರವಿರುವ, ಅಂದಾಜು ಎರಡು ಸಾವಿರ ವಿಭಿನ್ನ ಜನಾಂಗೀಯ ಗುಂಪುಗಳು, ಏಳುನೂರಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವವರು ಭಾರತದಲ್ಲಿರುವುದಾಗಿ ' ಎ ಪ್ರಾಮಿಸ್ಡ್ ಲ್ಯಾಂಡ್ 'ಆತ್ಮಚರಿತ್ರೆಯಲ್ಲಿ ಒಬಾಮಾ ಭಾರತದ ಬಗ್ಗೆಗಿನ ಮೋಹವನ್ನು ಬರೆದುಕೊಂಡಿದ್ದಾರೆ. 2010ರಲ್ಲಿ...
ಹೆಚ್ಚಿನ ಸುದ್ದಿ

ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್​ಲೈನ್ ಮಾರ್ಗ ಪೂರ್ಣ – ಕಹಳೆ ನ್ಯೂಸ್

ಕಾಸರಗೋಡು : ಕೊಚ್ಚಿ-ಮಂಗಳೂರು ಅನಿಲ ಕೊಳವೆಮಾರ್ಗ ಯೋಜನೆ ಕೊನೆಗೂ ಪೂರ್ಣಗೊಂಡಿದ್ದು, ಅನಿಲ ಸರಬರಾಜಿಗೆ ಸಂಪೂರ್ಣ ತಯಾರಾಗಿದೆ. ಈ ಯೋಜನೆಯಲ್ಲಿ ಅತ್ಯಂತ ಕ್ಲಿಷ್ಟಕರವೆನ್ನಲಾದ 540 ಮೀಟರ್ ಉದ್ದದ ಕೊಳವೆ ಕಾಮಗಾರಿ ಮುಗಿಯುವುದರೊಂದಿಗೆ ಯೋಜನೆ ಪೂರ್ಣಗೊಂಡಂತಾಗಿದೆ. ಕಾಸರಗೋಡಿನ ಚಂದ್ರಗಿರಿ ನದಿಯನ್ನು ಹಾದು ಹೋಗುವ ಈ 540 ಮೀಟರ್ ಉದ್ದದ ಕಾಮಗಾರಿ ಬಹಳ ಸವಾಲಿನದ್ದಾಗಿತ್ತು. ಅದೀಗ ಯಶಸ್ವಿಯಾಗಿದೆ. ಇನ್ನೆರಡು ದಿನಗಳ ಕಾಲ ಇಲ್ಲಿ ಅನಿಲ ಸರಬರಾಜು ಮಾಡಿ ಪರೀಕ್ಷಿಸಲಾಗುವುದು. ಅದು ಯಶಸ್ವಿಯಾದಲ್ಲಿ ಇದೇ ವಾರ...
ಹೆಚ್ಚಿನ ಸುದ್ದಿ

`GST’ ಪಾವತಿದಾರರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ – ಕಹಳೆ ನ್ಯೂಸ್

ನವದೆಹಲಿ : ಪ್ರಾಮಾಣಿಕ ತೆರಿಗೆದಾರರು ತಮ್ಮ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವಿವರಗಳನ್ನು ಹೊಸ ಸ್ವಯಂ-ಜನರೇಟ್ ಆದ ಆದಾಯ ತೆರಿಗೆ ನಮೂನೆಯಲ್ಲಿ ಪ್ರದರ್ಶಿಸುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸೋಮವಾರ ಹೇಳಿದೆ. ಫಾರ್ಮ್ 26ಎಎಸ್ ನಲ್ಲಿ ಪ್ರದರ್ಶಿಸಲಾದ ಜಿಎಸ್ ಟಿ ವಹಿವಾಟು ತೆರಿಗೆದಾರರಿಗೆ ಯಾವುದೇ ಹೆಚ್ಚುವರಿ ಅನುಸರಣೆ ಹೊರೆ ಇರುವುದಿಲ್ಲ ಎಂದು ಕಂದಾಯ ಇಲಾಖೆ ಪುನರುಚ್ಚರಿಸಿದೆ. ತೆರಿಗೆದಾರನ ಮಾಹಿತಿಗಾಗಿ 26ಎಎಸ್ ನಲ್ಲಿ ವಹಿವಾಟು ನಡೆಸಲಾಗುತ್ತಿದೆ....
1 146 147 148 149 150 174
Page 148 of 174