Friday, March 13, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಲವ್ ಜಿಹಾದ್‌ ,ಗೋ ಹತ್ಯೆ ನಿಷೇಧ ಕುರಿತಂತೆ ಕಠಿಣ ಕಾನೂನು ಕ್ರಮ ತರುವಂತೆ ಹಾಗೂ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಖಾಯಂ ಅರ್ಚಕರನ್ನು ನೇಮಿಸುವಂತೆ ಆಗ್ರಹಿಸಿ ರಾಜ್ಯದ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ್ ಅವರಿಗೆ ಬಜರಂಗದಳ ದಕ್ಷಿಣ ಪ್ರಾಂತದ ವತಿಯಿಂದ ಮನವಿ-ಕಹಳೆ ನ್ಯೂಸ್

ಈ ಸಂದರ್ಭ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ, ಪುತ್ತೂರು ಜಿಲ್ಲಾ ಸಂಯೋಜಕ ಶ್ರೀಧರ ತೆಂಕಿಲ, ಸಾಪ್ತಾಹಿಕ ಮಿಲನ್ ಪ್ರಮುಖ್ ಜಿತೇಶ್ ಬಲ್ನಾಡು, ಪುತ್ತೂರು ಪ್ರಖಂಡ ಸಹ ಸಂಯೋಜಕ ಜಯಂತ ಕುಂಜೂರುಪಂಜ, ವಿಶ್ವ ಹಿಂದು ಪರಿಷದ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು ಉಪಸ್ಥಿತರಿದ್ದರು....
ಹೆಚ್ಚಿನ ಸುದ್ದಿ

ನಾಳೆ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ(ನಿ.)ದ  ಅಮೃತ ವಾಹಿನಿ ಸಭಾಭವನ ಮತ್ತು ದಾಸ್ತಾನು ಕೊಠಡಿಯ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ(ನಿ.)ದ ವತಿಯಿಂದ ಅಮೃತ ವಾಹಿನಿ ಸಭಾಭವನ ಮತ್ತು ದಾಸ್ತಾನು ಕೊಠಡಿಯ ಉದ್ಘಾಟನಾ ಸಮಾರಂಭ ನಾಳೆ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ ನಡೆಯಲಿದೆ. ಸಭಾಭವನವನ್ನು ಶಾಸಕರಾದ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ದಾಸ್ತಾನು ಕೊಠಡಿಯನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟ ಕುಲಶೇಖರ ಮಂಗಳೂರಿನ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ನಾಮ ಫಲಕವನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟ ಕುಲಶೇಖರ ಮಂಗಳೂರಿನ ಉಪಾಧ್ಯಕ್ಷರಾದ ಪ್ರಕಾಶ್ಚಂದ್ರ...
ಹೆಚ್ಚಿನ ಸುದ್ದಿ

ಇಂದು ಮೋದಿ ಪುಣೆಯ ಸೀರಮ್ ಸಂಸ್ಥೆಗೆ ಭೇಟಿ :ಲಸಿಕೆ ಅಭಿವೃದ್ಧಿ ಕಾರ್ಯದ ಪರಿಶೀಲನೆ – ಕಹಳೆ ನ್ಯೂಸ್

ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ಲಸಿಕೆ ಸಿದ್ಧಪಡಿಸುತ್ತಿರುವ ಮೂರು ಪ್ರಮುಖ ಸಂಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚೊಚ್ಚಲ ಭೇಟಿ ನೀಡಲಿದ್ದಾರೆ. ಅಹ್ಮದಾಬಾದ್‌ನ ಝೈಡಸ್‌ ಕ್ಯಾಡಿಲಾ, ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಮತ್ತು ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಸಂಸ್ಥೆಗಳಿಗೆ ಮೋದಿ ಭೇಟಿ ನೀಡಿ, ಲಸಿಕೆ ಅಭಿವೃದ್ಧಿಯ ಪ್ರಗತಿಯನ್ನು ವೀಕ್ಷಿಸಲಿದ್ದಾರೆ. ಲಸಿಕೆ ಸಂಸ್ಕರಣೆ, ಸರಬರಾಜು ಕುರಿತು ಸಂಸ್ಥೆಯ ತಜ್ಞರೊಂದಿಗೆ ಚರ್ಚಿಸಲಿದ್ದಾರೆ. ಎಲ್ಲಿಂದ ಆರಂಭ? ಪ್ರಧಾನಿ ಶನಿವಾರ ಬೆಳಗ್ಗೆ 9.30ಕ್ಕೆ ಅಹ್ಮದಾಬಾದ್‌ಗೆ...
ಹೆಚ್ಚಿನ ಸುದ್ದಿ

ಗ್ರಾಮ ಪಂಚಾಯತಿ ಚುನಾವಣೆಗಳು ಭವಿಷ್ಯದ ನಾಯಕನನ್ನು ರೂಪಿಸುತ್ತವೆ: ನಳಿನ್ ಕುಮಾರ್ – ಕಹಳೆ ನ್ಯೂಸ್

ಉಡುಪಿ: ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಸ್ಥಳೀಯ ಮತ್ತು ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಉಡುಪಿಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಪಂಚಾಯಿತಿಯಿಂದ ಪಾರ್ಲಿಮೆಂಟ್‍ವರೆಗೆ ಕಾಂಗ್ರೆಸ್ ಮುಕ್ತ ಮಾಡುವ ಸಂಕಲ್ಪದೊಂದಿಗೆ ಶೇ.80ರ ಗೆಲುವಿನ ಗುರಿ ಇಟ್ಟಿದ್ದೇವೆ. ಮಹಾತ್ಮ ಗಾಂಧಿಯ ಗ್ರಾಮ ಸ್ವರಾಜ್ಯ, ಪ್ರಧಾನಿಯ ಆದರ್ಶ ಗ್ರಾಮ ಹಾಗೂ ಸಾಮಾನ್ಯ ಕಾರ್ಯಕರ್ತನನ್ನು ನಾಯಕನ್ನಾಗಿಸುವ ಚಿಂತನೆಯಲ್ಲಿ ಈ ಬಾರಿಯ ಚುನಾವಣೆಯನ್ನು...
ಹೆಚ್ಚಿನ ಸುದ್ದಿ

‘ಒಂದು ದೇಶ, ಒಂದು ಚುನಾವಣೆ’ ಅಗತ್ಯವಿದೆ:ಪ್ರಧಾನಿ ಮೋದಿ – ಕಹಳೆ ನ್ಯೂಸ್

ಹೊಸದಿಲ್ಲಿ :'ಒಂದು ದೇಶ, ಒಂದು ಚುನಾವಣೆ'ಯ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ಪುನರುಚ್ಚರಿಸಿದ್ದಾರೆ. ``ಪ್ರತಿ ಕೆಲ ತಿಂಗಳುಗಳಿಗೊಮ್ಮೆ ನಡೆಯುವ ಚುನಾವಣೆಗಳು ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡುವುದರಿಂದ ಒಂದು ದೇಶ, ಒಂದು ಚುನಾವಣೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ 80ನೇ ಅಖಿಲ ಭಾರತ ಚುನಾವಣಾ ಅಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು. ಚುನಾವಣೆಗಳು ಕೆಲವು ತಿಂಗಳುಗಳ ಅಂತರದಲ್ಲಿ ವಿವಿಧ ಕಡೆಗಳಲ್ಲಿ ನಡೆಯುತ್ತಿರುತ್ತವೆ. ಅಭಿವೃದ್ಧಿಯ ಮೇಲೆ...
ಹೆಚ್ಚಿನ ಸುದ್ದಿ

ಎಸ್ ಪಿಬಿ ಹೆಸರಲ್ಲಿ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿವಿ ಅನುಮೋದನೆ – ಕಹಳೆ ನ್ಯೂಸ್

ಮೈಸೂರು : ಖ್ಯಾತ ಹಿರಿಯ ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಸಂಗೀತ ಪೀಠ ತೆರೆಯಲು ಮೈಸೂರು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ. ಸಂಗೀತ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆಗೆ ಬುಧವಾರ ನಡೆದ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ದೊರಕಿದೆ. ಸಂಗೀತದ ಎಲ್ಲಾ ಪ್ರಕಾರಗಳ ಬಹುಮುಖ ಬೆಳವಣಿಗೆಗಾಗಿ ಪೀಠ ಸ್ಥಾಪಿಸಲಾಗುತ್ತಿದೆ. ವಿವಿಯ ಲಲಿತ ಕಲೆಗಳ ಕಾಲೇಜಿನಲ್ಲಿ...
ಹೆಚ್ಚಿನ ಸುದ್ದಿ

ಸಂವಿಧಾನ ದಿನಾಚರಣೆ : ನಾಡಿನ ಜನತೆಗೆ ಶುಭಕೋರಿದ ಸಿಎಂ ಬಿ.ಎಸ್. ಯಡಿಯೂರಪ್ಪ -ಕಹಳೆ ನ್ಯೂಸ್

ಬೆಂಗಳೂರು : ಸಂವಿಧಾನ ದಿನ ಆಚರಣೆ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಭಾಶಯಗಳನ್ನು ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಯೊಬ್ಬ ಭಾರತೀಯನ ಹಕ್ಕು, ಘನತೆಯನ್ನು ನಮ್ಮ ಸಂವಿಧಾನ ರಕ್ಷಿಸುತ್ತಿದೆ. ನಮ್ಮ ಶ್ರೇಷ್ಠ ಸಂವಿಧಾನದ ಸದಾಶಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಡಾ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನೆಗೆ ಕೊಡುಗೆ ನೀಡಿದ ಎಲ್ಲ ಮಹನೀಯರಿಗೆ ವಂದಿಸುತ್ತಾ, ಎಲ್ಲರಿಗೂ ಸಂವಿಧಾನ...
ಹೆಚ್ಚಿನ ಸುದ್ದಿ

ಹಣದುಬ್ಬರದ ಎಫೆಕ್ಟ್; ಡಿಸೆಂಬರ್ ನಿಂದ ಹಲವು ವಸ್ತುಗಳ ಬೆಲೆ ಏರಿಕೆ – ಕಹಳೆ ನ್ಯೂಸ್

ಪದಾರ್ಥಗಳ ಹಣದುಬ್ಬರ ಏರಿಕೆ ಆಗುತ್ತಲೇ ಇದೆ ಮತ್ತು ಗ್ರಾಹಕ ಬಳಕೆ ವಸ್ತುಗಳು ಮೂರರಿಂದ ಐದು ಪರ್ಸೆಂಟ್ ಏರಿಕೆ ಕಾಣುವ ಸಾಧ್ಯತೆ ಇದೆ. ಇದರ ಜತೆಗೆ ಆಮದು ಪ್ರಮಾಣ ಕಡಿಮೆ ಮಾಡಲಾಗಿದೆ ಮತ್ತು ಉಕ್ಕು, ತಾಮ್ರ ಸೇರಿದಂತೆ ಇತರ ಲೋಹಗಳು ಐದರಿಂದ ಹನ್ನೊಂದು ಪರ್ಸೆಂಟ್ ಗಳಿಕೆ ಕಂಡಿವೆ. ಮುಂದಿನ ತಿಂಗಳಿಂದ, ಅಂದರೆ ಡಿಸೆಂಬರ್ ನಿಂದ ಗೃಹೋಪಯೋಗಿ ವಸ್ತುಗಳಾದ ವಾಷಿಂಗ್ ಮಷೀನ್, ರೆಫ್ರಿಜರೇಟರ್, ಟೆಲಿವಿಷನ್ ಸೆಟ್ ಗಳು ಮತ್ತು ಏರ್ ಕಂಡೀಷನರ್ ಗಳ...
1 141 142 143 144 145 174
Page 143 of 174