Thursday, March 19, 2026

ಸುದ್ದಿ

ಜಿಲ್ಲೆಸುದ್ದಿಹಾಸನ

ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿದ್ದ ಅಪರಿಚಿತ ಅರೆಸ್ಟ್ – ಕಹಳೆ ನ್ಯೂಸ್

ಹಾಸನ: ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ, ಆತಂಕ ಸೃಷ್ಟಿಸಿದ್ದ ಅಪರಿಚಿತನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಬಂಧಿತ ಆರೋಪಿ. ಜ.17ರಂದು ಹಾಸನದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ. ಇದನ್ನು ಗಮನಿಸಿದ್ದ ಬಾಲಕಿ ಗಾಬರಿಯಲ್ಲೇ ಓಡೋಡಿ ಬಂದು ಮನೆ ಸೇರಿಕೊಂಡಿದ್ದಳು. ಬಳಿಕ ಮನೆ ಬಳಿ ಬಂದ ಆರೋಪಿ...
ಜಮ್ಮು ಮತ್ತು ಕಾಶ್ಮೀರಜಿಲ್ಲೆರಾಜ್ಯಸುದ್ದಿ

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ, ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಚಕಮಕಿ – ಕಹಳೆ ನ್ಯೂಸ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಪಾಕಿಸ್ತಾನದ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಕೆಲ ಭಯೋತ್ಪಾದಕರು ಇಲ್ಲಿ ಅಡಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರದಂದು ಚತ್ರೂ ಬೆಲ್ಟ್‌ನ ಸೊನ್ನಾರ್ ಹಳ್ಳಿಯ ಬಳಿ ಮಂಡ್ರಲ್-ಸಿಂಗ್‌ಪೊರಾ ಪ್ರದೇಶದಲ್ಲಿ ‘ಆಪರೇಷನ್ ತ್ರಾಶಿ-ಐ’ ಆರಂಭವಾಯಿತು. ಈ ವೇಳೆ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಪತ್ತೆಹಚ್ಚಿದ ನಂತರ ಭಯೋತ್ಪಾದಕರು ಗ್ರೆನೇಡ್ ದಾಳಿ...
ಸುದ್ದಿ

ಗ್ರೀನ್‌ಲ್ಯಾಂಡ್ ಬಳಿಕ ಹಿಂದೂ ಮಹಾಸಾಗರದ ಮೇಲೆ ಟ್ರಂಪ್ ಕಣ್ಣು – ಕಹಳೆ ನ್ಯೂಸ್

ವಾಷಿಂಗ್ಟನ್: ಗ್ರೀನ್‌ಲ್ಯಾಂಡ್  ದ್ವೀಪ ವಶದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಕಣ್ಣು ಇದೀಗ ಹಿಂದೂ ಮಹಾಸಾಗರದಲ್ಲಿರುವ ಪುಟ್ಟ ದ್ವೀಪದ ಡಿಯಾಗೋ ಗಾರ್ಸಿಯೋದ  ಮೇಲೆ ಬಿದ್ದಿದೆ. ಈ ಹಿಂದೆ ಆದ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಇತ್ತೀಚಿನ ಆದೇಶದ ಅನ್ವಯ, ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವ ಡಿಯಾಗೋ ಗಾರ್ಸಿಯಾ ದ್ವೀಪವನ್ನು ಮಾರಿಷಸ್‌ಗೆ  ಬಿಟ್ಟುಕೊಡಲು ಬ್ರಿಟನ್ ಸರ್ಕಾರ ಮುಂದಾಗಿದೆ. ಆದರೆ ಈ ದ್ವೀಪದಲ್ಲಿ ಅಮೆರಿಕದ...
ಸುದ್ದಿ

ಕರಾಚಿ ಶಾಪಿಂಗ್ ಮಾಲ್‌ನಲ್ಲಿ ಅಗ್ನಿ ದುರಂತ – ಒಂದೇ ಮಳಿಗೆಯಲ್ಲಿ 30 ಶವಗಳು ಪತ್ತೆ; ಬೆಚ್ಚಿಬಿದ್ದ ಪೊಲೀಸ್ರು! – ಕಹಳೆ ನ್ಯೂಸ್

ಇಸ್ಲಾಮಾಬಾದ್‌: ಕರಾಚಿಯ ಗುಲ್ ಪ್ಲಾಜಾ ಶಾಪಿಂಗ್‌ ಮಾಲ್‌ನಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಪರಿಶೀಲನೆ ವೇಳೆ ಒಂದೇ ಮಳಿಗೆಯಲ್ಲಿ 30 ಶವಗಳು ಪತ್ತೆಯಾಗಿದ್ದು, ಒಟ್ಟು ಸಾವು 100 ಮೀರಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪಾಕಿಸ್ತಾನದ ʻಮನಿ ಕ್ಯಾಪಿಟಲ್‌ʼ ಅಂತಲೇ ಫೇಮಸ್‌ ಆಗಿರುವ ಕರಾಚಿ ಸದರ್‌ ಪ್ರದೇಶದಲ್ಲಿರುವ ಗುಲ್‌ ಶಾಪಿಂಗ್‌ ಮಾಲ್‌ನ ನೆಲಮಾಳಿಗೆಯಲ್ಲಿ ಜ.17 ರಂದು ಬೆಂಕಿ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ...
ಸುದ್ದಿ

ವಿಧಾನಸಭೆಯಲ್ಲಿ ಹೈಡ್ರಾಮಾ; ಭಾಷಣ ಓದದೆ ತೆರಳಿದ ಗವರ್ನರ್ – ಕಹಳೆ ನ್ಯೂಸ್

ಬೆಂಗಳೂರು: ಇಂದಿನಿಂದ ಜನವರಿ 31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ನರೇಗಾ ಹೆಸರು ಬದಲಾವಣೆಗೆ ಆಕ್ಷೇಪಿಸಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನಕ್ಕೆ ರಾಜ್ಯಪಾಲರು ಬರಲು ನಿರಾಕರಿಸಿದ್ದರು, ಇದೀಗ ಸದನಕ್ಕೆ ಬಂದು ಭಾಷಣ ಮಾಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದು, ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ್ದಾರೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ಭಾಷಣ ಮಾಡಿದ್ದು, ಆರ್ಥಿಕ ಸ್ಥಿತಿಗತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನನ್ನ...
ಬೆಂಗಳೂರುರಾಜ್ಯಸುದ್ದಿ

ವಿಧಾನಸೌಧಕ್ಕೆ ರಾಜ್ಯಪಾಲರ ಆಗಮನ : ಹೂಗುಚ್ಛ ನೀಡಿ ಆತ್ಮೀಯ ಸ್ವಾಗತ ಕೋರಿದ ಸಿಎಂ – ಕಹಳೆ ನ್ಯೂಸ್

ಬೆಂಗಳೂರು: ಭಾರೀ ಹೈಡ್ರಾಮಾ ಬಳಿಕ ಕೊನೆಗೂ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ವಿಧಾನ ಸೌಧಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌ ಸೇರಿದಂತೆ ಇತರ ಸಚಿವರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ನಗುನಗುತ್ತಲೇ ಗಣ್ಯರು ರಾಜ್ಯಪಾಲರನ್ನ ಸ್ವಾಗತಿಸಿದರು. ಬಳಿಕ ರೆಡ್ ಕಾರ್ಪೆಟ್ ಮೂಲಕ ವಿಧಾನ ಸೌಧದೊಳಗೆ ಕರೆದೊಯ್ದರು. ರಾಜ್ಯಪಾಲರು ಪೀಠದ ಬಳಿ ನಿಲ್ಲುತ್ತಿದ್ದಂತೆ, ರಾಷ್ಟ್ರಗೀತೆ ನುಡಿಸಲಾಯಿತು....
ಸುದ್ದಿ

ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರು ನಲ್ಲಿ ವಾರ್ಷಿಕ ಕ್ರೀಡಾಕೂಟ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರು ನಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಅದ್ಯೆಕ್ಷೆ ಪುಷ್ಪಾ ಡಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಮಾಜಿ ಅದ್ಯೆಕ್ಷೆ ಕೃಷ್ಣಪ್ಪ ಸಫಲ್ಯ, ಮಾಜಿ ಪಂಚಾಯತ್ ಉಪಾಧ್ಯಕ್ಷ ಪ್ರೇಮನಾಥ್ ಶೆಟ್ಟಿ ಅಂತರ,ಅಶೋಕ್ ಶೆಟ್ಟಿ ನೆಲ್ಯಾಡ್ಕ,ಸುನಿತಾ ವಾಸ್ ಪೋಯಿತಾಜೆ,ಪ್ರಭಾವಿ ಮುಖ್ಯ ಶಿಕ್ಷಕಿ ಪ್ರಸ್ಸಿಲ್ಲ,ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು....
ರಾಜ್ಯಸುದ್ದಿ

ಪ್ರಯಾಗ್‌ರಾಜ್‌ನಲ್ಲಿ IAFನ ತರಬೇತಿ ವಿಮಾನ ಪತನ ; ಇಬ್ಬರು ಪೈಲಟ್ ಸೇಫ್ – ಕಹಳೆ ನ್ಯೂಸ್

ಲಕ್ನೋ: ಇಲ್ಲಿನ ಪ್ರಯಾಗ್‌ರಾಜ್‌ನಲ್ಲಿ  ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ನ್ನು ರಕ್ಷಣೆ ಮಾಡಲಾಗಿದೆ. ಇಂದು (ಜ.21) ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಪ್ರಯಾಗ್‌ರಾಜ್‌ನ ಸಂಗಮದಿಂದ 2 ಕಿ.ಮೀ ದೂರದಲ್ಲಿರುವ ಕೆರೆಯಲ್ಲಿ ಮೈಕ್ರೋಲೈಟ್ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈಗಾಗಲೇ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಇಬ್ಬರು ಪೈಲಟ್‌ನ್ನು ರಕ್ಷಿಸಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ...
1 68 69 70 71 72 3,296
Page 70 of 3296