Thursday, March 19, 2026

ಸುದ್ದಿ

ಅಂತಾರಾಷ್ಟ್ರೀಯಸುದ್ದಿ

ಅಮೆರಿಕದಲ್ಲಿ ಭೀಕರ ಹಿಮ ಬಿರುಗಾಳಿ, 8,000 ವಿಮಾನಗಳ ಹಾರಾಟ ದಿಢೀರ್ ರದ್ದು – ಕಹಳೆ ನ್ಯೂಸ್

ಅಮೆರಿಕ ಇದೀಗ ಪ್ರಕೃತಿಯ ಮುನಿಸಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ, ಇದೀಗ ಅಮೆರಿಕದ ಹಲವು ರಾಜ್ಯಗಳಲ್ಲಿ ದಿಢೀರ್ ಭೀಕರ ಹಿಮ ಬಿರುಗಾಳಿ ಅಪ್ಪಳಿಸಿದೆ. ಅದರಲ್ಲೂ, ಪ್ರಮುಖ ರಾಜ್ಯಗಳ ಪರಿಸ್ಥಿತಿ ಹಿಮ ಬಿರುಗಾಳಿಯ ಪರಿಣಾಮ ಅತ್ಯಂತ ಸೂಕ್ಷ್ಮವಾಗಿದೆ. ಹೀಗಾಗಿ ಜನರು ಮನೆಗಳಿಂದ ಹೊರಗೆ ಬರಲು ಸಾವಿರ ಬಾರಿ ಯೋಚನೆ ಮಾಡುವ ಸ್ಥಿತಿಯು ನಿರ್ಮಾಣ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಸುಮಾರು 8,000 ವಿಮಾನಗಳ ಹಾರಾಟವನ್ನೇ ದಿಢೀರ್ ರದ್ದು ಮಾಡಿ ಆದೇಶ...
ಅಂತಾರಾಷ್ಟ್ರೀಯಸುದ್ದಿ

ಮನಾಲಿಯಲ್ಲಿ ಭಾರೀ ಹಿಮಪಾತ : 8 ಕಿಮೀ ಟ್ರಾಫಿಕ್‌ ಜಾಮ್‌, ರಸ್ತೆಯಲ್ಲೇ ನಿಂತ ಪ್ರವಾಸಿಗರು- ಕಹಳೆ ನ್ಯೂಸ್

ಧರ್ಮಶಾಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನಾಲಿ, ಶಿಮ್ಲಾ, ಕಾಲ್ಕಾ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ  ನಿರಂತರ ಹಿಮಪಾತವಾಗುತ್ತಿದೆ. ಒಂದು ಕಡೆ ಪ್ರವಾಸಿಗರು ಸಂಭ್ರಮಿಸುತ್ತಿದ್ದರೆ, ಇನ್ನೂ ಕೆಲವರು ವಾಪಸ್ ಊರುಗಳಿಗೆ ಮರಳಲು ರಸ್ತೆಗಳಿಲ್ಲದೇ ಪರದಾಡುತ್ತಿದ್ದಾರೆ. ಕುಲು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಕೋಥಿ ಮತ್ತು ಮನಾಲಿ  ರಸ್ತೆಗಳು ವಾಹನಗಳಿಂದಲೇ ತುಂಬಿ ತುಳುಕುತ್ತಿವೆ. ಹಿಮಪಾತದಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ 8 ಕಿಮೀಗೂ ಅಧಿಕ ಉದ್ದಕ್ಕೂ ವಾಹನಗಳು ರಸ್ತೆಯಲ್ಲೇ ನಿಂತಿವೆ....
ಜಿಲ್ಲೆಬೆಳಗಾವಿರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ : 400 ಕೋಟಿ ದರೋಡೆ : ಮೂರು ರಾಜ್ಯದ ಪೊಲೀಸರಿಂದ ಶೋಧ – ಕಹಳೆ ನ್ಯೂಸ್

ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನ ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ದರೋಡೆ ಪ್ರಕರಣ ಅಂತಾರಾಜ್ಯ ಮಟ್ಟದ್ದಾಗಿದ್ದು, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ 3 ರಾಜ್ಯಗಳ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದಾರೆ. ದರೋಡೆ ನಡೆದಿದ್ದು ಯಾವಾಗ? ಗೋವಾದಿಂದ (Goa) ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ...
ಅಂತಾರಾಷ್ಟ್ರೀಯವಾಣಿಜ್ಯಸುದ್ದಿ

2026ರಲ್ಲಿ ಜಗತ್ತಿಗೆ ಆರ್ಥಿಕ ಗಂಡಾಂತರ? ಚಿನ್ನದ ಮೇಲೆ ಹಣ ಹೂಡುವವರಿಗೆ ಬಾಬಾ ವಂಗಾ ಶಾಕಿಂಗ್ ಎಚ್ಚರಿಕೆ- ಕಹಳೆ ನ್ಯೂಸ್

ಭಾರತದಲ್ಲಿ ಚಿನ್ನದ ಬೆಲೆ ಈಗಾಗಲೇ ಪ್ರತಿ 10 ಗ್ರಾಂಗೆ ಸರಿಸುಮಾರು 1.59 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಬೆಲೆ ಏರಿಕೆಯ ಈ ಅನಿಶ್ಚಿತತೆಯ ನಡುವೆಯೇ, ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಹೊಂದಿದ್ದ ಬಾಬಾ ವಂಗಾ ಅವರ 2026ರ ಭವಿಷ್ಯವಾಣಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಭವಿಷ್ಯವಾಣಿಯ ಪ್ರಕಾರ, 2026ರಲ್ಲಿ ಜಗತ್ತು ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದ್ದು, ಇದು ಚಿನ್ನದ ಬೆಲೆಯನ್ನು ಆಕಾಶಕ್ಕೆ ಏರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಾಬಾ...
ಅಂತಾರಾಷ್ಟ್ರೀಯಸುದ್ದಿ

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಸಜೀವ ದಹನ : ಪ್ರೀ ಪ್ಲ್ಯಾನ್ಡ್‌ ಮರ್ಡರ್‌ ಅಂತ ಕುಟುಂಬ ಆರೋಪ- ಕಹಳೆ ನ್ಯೂಸ್

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಸರಣಿ ಹತ್ಯೆ ಮುಂದುವರಿದಿದೆ. ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ವ್ಯಕ್ತಿಯನ್ನ ಗ್ಯಾರೇಜ್‌ ಒಳಗೇ ಸುಟ್ಟುಹಾಕಲಾಗಿದೆ. ಆದ್ರೆ ಇದು ಪೂರ್ವನಿಯೋಜಿತ ಕೃತ್ಯ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಚಂಚಲ್ ಚಂದ್ರ ಭೌಮಿಕ್ ಸಜೀವ ದಹನವಾದ ವ್ಯಕ್ತಿ. ನರಸಿಂಗ್ಡಿ ಪೊಲೀಸ್ ಠಾಣೆಗೆ  ಹೊಂದಿಕೊಂಡಿರುವ ಮಸೀದಿ ಮಾರುಕಟ್ಟೆ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಭೌಮಿಕ್‌ ಮೂಲತಃ ಕುಮಿಲ್ಲಾ ಜಿಲ್ಲೆಯ ಲಕ್ಷ್ಮಿಪುರ ಗ್ರಾಮದವರು, ಕೆಲಸದ ನಿಮಿತ್ತ ನರಸಿಂಗ್ಡಿ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ರಾಷ್ಟ್ರಧ್ವಜಕ್ಕೆ ಆಗುವ ಅಪಮಾನ ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಯ ಮನವಿ- ಕಹಳೆ ನ್ಯೂಸ್

ಮಂಗಳೂರು, ಜನವರಿ 24, 2026: ರಾಷ್ಟ್ರಧ್ವಜವು ರಾಷ್ಟ್ರದ ಆತ್ಮವಾಗಿದೆ. ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ರಂದು ರಾಷ್ಟ್ರಧ್ವಜಗಳನ್ನು ಅತ್ಯಂತ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಧ್ವಜಗಳು ರಸ್ತೆ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗದ ಕಾರಣ, ರಾಷ್ಟ್ರಧ್ವಜಗಳು ಅನೇಕ ದಿನಗಳವರೆಗೆ ಅಗೌರವವನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅಪಮಾನವನ್ನು ತಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ...
ದಕ್ಷಿಣ ಕನ್ನಡರಾಜ್ಯವಾಣಿಜ್ಯಸುದ್ದಿ

ಗ್ರಾಹಕರ ಅನುಕೂಲಕ್ಕಾಗಿ ಸಣ್ಣ ಪ್ಯಾಕ್‌ಗಳ ಬಿಡುಗಡೆ , ರೂ.10ಕ್ಕೆ ನಂದಿನಿ ಹಾಲು, ಮೊಸರು – ಕಹಳೆ ನ್ಯೂಸ್

ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್‌ಗಳಲ್ಲೂ ಲಭ್ಯವಾಗಲಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗ್ರಾಹಕರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ಯಾಕ್‌ಗಳನ್ನು ಪರಿಚಯಿಸಿದೆ. ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು ಹತ್ತು ಹೊಸ ನಂದಿನಿ ಉತ್ಪನ್ನಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಈ ಪೈಕಿ ರೂ.10 ದರದ ಹಾಲು ಹಾಗೂ ಮೊಸರಿನ ಸಣ್ಣ ಪ್ಯಾಕ್‌ಗಳ ಜೊತೆಗೆ ಮಧ್ಯಮ ಕೊಬ್ಬಿನ...
ಸುದ್ದಿ

ಕರಾವಳಿ ಮುದ್ದು ಗುಮ್ಮನಿಗಾಗಿ ಹಾಡಿದ ಸಿದ್ ಶ್ರೀರಾಮ್- ಕಹಳೆ ನ್ಯೂಸ್

‘ಮುದ್ದು ಗುಮ್ಮ…ಮುದ್ದು ಗುಮ್ಮ ನೀನೇನಾ…’ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ಹಾಡಿನದ್ದೇ ಸದ್ದು. ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ನಟನೆಯ ಕರಾವಳಿ ಸಿನಿಮಾದದಿಂದ ಮುದ್ದು ಗುಮ್ಮ ಹಾಡು ರಿಲೀಸ್ ಆಗಿದ್ದು ಗಾನಪ್ರಿಯ ಹೃದಯ ಗೆದ್ದಿದೆ. ಸಿದ್ ಶ್ರೀರಾಮ್ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಹಾಡುಗಳ ಲಿಸ್ಟ್‌ಗೆ ಮುದ್ದು ಗುಮ್ಮ ಕೂಡ ಸೇರಿಕೊಳ್ಳುವುದು ಫಿಕ್ಸ್. ಕರಾವಳಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ...
1 64 65 66 67 68 3,296
Page 66 of 3296