ಅಬುಧಾಬಿಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು : 2 ವಿಮಾನಗಳಲ್ಲಿ 500 ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ- ಕಹಳೆ ನ್ಯೂಸ್
ಬೆಂಗಳೂರು: ಇಸ್ರೇಲ್-ಇರಾನ್ ಯುದ್ಧದಿಂದಾಗಿ ರದ್ದಾಗಿದ್ದ ವಿಮಾನಯಾನ ಸೇವೆ ಸೋಮವಾರ (ಮಾ.3) ದಿಂದ ಆರಂಭವಾಗಿದ್ದು, ಸಾಕಷ್ಟು ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ಅಬುಧಾಬಿಯಿಂದ ಬೆಂಗಳೂರಿಗೆ ಬಂದ 2 ವಿಮಾನಗಳಲ್ಲಿ ಹಂತ ಹಂತವಾಗಿ 500 ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸೋಮವಾರ ರಾತ್ರಿ 10 ಗಂಟೆ ಹೊತ್ತಿಗೆ ಅಬುಧಾಬಿಯಿಂದ ಬಂದ ವಿಮಾನದಲ್ಲಿ 210 ಪ್ರಯಾಣಿಕರು (ಕನ್ನಡಿಗರು) ಸೇಫಾಗಿ ಲ್ಯಾಂಡ್ ಆಗಿದ್ದರು. ಮಂಗಳವಾರ (ಇಂದು) ಬೆಳಗ್ಗಿನ ಜಾವ 3:20...







