Tuesday, March 17, 2026

ರಾಷ್ಟ್ರೀಯ

ಅಂಕಣಬೆಂಗಳೂರುಸುದ್ದಿ

ಬೆಂಗಳೂರಲ್ಲಿ ಜಡಿಮಳೆ ; ರಸ್ತೆಗಳು ಜಲಾವೃತ, ವಾಹನ ಸವಾರರು ಪರದಾಟ-ಕಹಳೆ ನ್ಯೂಸ್

 ನಿನ್ನೆ ಸಂಜೆಯಿಂದ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆ ಬೆಂಗಳೂರು: ಸಿಲಿಕಾನ್ ಸಿಟಿ ಮಳೆಯಿಂದ ತೊಯ್ತು ತೊಪ್ಪೆಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಗುರುವಾರ ಸಂಜೆಯಿಂದ ಶುರುವಾದ ಮಳೆ ಜಿಟಿಜಿಟಿ ಸುರಿಯುತ್ತಿದೆ. ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್ ಮಾರ್ಕೆಟ್, ಯಲಹಂಕ, ಓಕಳಿಪುರ, ಸರ್ಜಾಪುರ, ಹೆಬ್ಬಾಳ ಸೇರಿದಂತೆ ಹಲವು ಕಡೆ ಮಳೆಯಿಂದ ತೊಂದರೆಯಾಗಿದೆ. ಹಲವು ಕಡೆ ಮರಗಳು ಧರೆಗುರುಳಿವೆ. ಚಾಮರಾಜಪೇಟೆಯ ಸಂಗಮ ಸರ್ಕಲ್ ಬಳಿ ಮರ ಧರೆಗುರುಳಿದೆ. ಹೊಸೂರು ರಸ್ತೆ, ಮೈಸೂರು ರಸ್ತೆ,...
ಅಂಕಣಕ್ರೈಮ್ಬೆಂಗಳೂರುಸುದ್ದಿ

ಸೋಶಿಯಲ್ ಮೀಡಿಯಾದಲ್ಲಿ ; ಸಿಎಂ ನಿಂದಿಸಿದ್ದ ನಿವೃತ್ತ ಯೋಧನ ಬಂಧನ-ಕಹಳೆ ನ್ಯೂಸ್

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದ ವ್ಯಕ್ತಿಯನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ. ವಸಂತ್ ಕುಮಾರ್ (40) ಬಂಧಿತ ಆರೋಪಿ. ಸಕಲೇಶಪುರದ ವಸಂತ್ ಕುಮಾರ್ ನಿವೃತ್ತ ಯೋಧನಾಗಿದ್ದು, ನಿವೃತ್ತಿ ಬಳಿಕ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದ. ಮೈಸೂರಿನಲ್ಲಿ  ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನ ಕನ್ನಡ ಬರುತ್ತ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದರು. ಇದಕ್ಕೆ ಹನುಮ ಭಕ್ತ ಅನ್ನೋ ಫೇಸ್‌ಬುಕ್ ಪೇಜ್‌ನಲ್ಲಿ ಸಿಎಂ ನಿಂದಿಸಿ ವಸಂತ್ ಕುಮಾರ್ ಪೋಸ್ಟ್...
ಅಂಕಣಬೆಂಗಳೂರುಸುದ್ದಿ

ಸೌಜನ್ಯ ಮಾವ ವಿಠಲ ಗೌಡ ; ವಿರುದ್ಧ ಧರ್ಮಸ್ಥಳ ಗ್ರಾಮಸ್ಥರಿಂದ ಎಸ್‌ಐಟಿಗೆ ದೂರು-ಕಹಳೆ ನ್ಯೂಸ್

ಮಂಗಳೂರು: ಸೌಜನ್ಯ ಮಾವ ವಿಠಲ ಗೌಡ  ವಿರುದ್ಧ ಧರ್ಮಸ್ಥಳ ಗ್ರಾಮಸ್ಥರು ಎಸ್‌ಐಟಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಧರ್ಮಸ್ಥಳ ಗ್ರಾಮಸ್ಥ ಸಂದೀಪ್ ರೈ ದೂರು ಕೊಟ್ಟಿದ್ದಾರೆ. ತನಿಖಾ ಹಂತದಲ್ಲಿ ವಿಠಲ ಗೌಡನಿಂದ ಎಸ್ಐಟಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪ ಹೊರಿಸಲಾಗಿದೆ. ವಿಚಾರಣೆ ಮುಗಿಸಿ ಹೊರಬಂದು ವಿಡಿಯೋ ಹರಿಬಿಟ್ಟಿದ್ದಾರೆ. ಎಸ್ಐಟಿ ಯಾವುದೇ ಮಾಹಿತಿ ನೀಡದೇ ಇದ್ದರೂ ವಿಡಿಯೋ ಹರಿಬಿಟ್ಟು ತನಿಖೆ ಹಾದಿ ತಪ್ಪಿಸುತ್ತಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ವಿಠಲ ಗೌಡನ ಹಿಂದೆ...
ಅಂಕಣಕ್ರೈಮ್ಬೆಂಗಳೂರುಸುದ್ದಿ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ; ಯೋಗ ಗುರು ನಿರಂಜನಾ ಮೂರ್ತಿ ಅರೆಸ್ಟ್-ಕಹಳೆ ನ್ಯೂಸ್

ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಯೋಗ ಗುರು ನಿರಂಜನಾ ಮೂರ್ತಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಯೋಗ ಗುರು ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರವೊಂದನ್ನು ನಡೆಸುತ್ತಿದ್ದ. ಈ ಯೋಗ ಸೆಂಟರ್‌ಗೆ ಓರ್ವ ಅಪ್ರಾಪ್ತ ಬಾಲಕಿ ಬರುತ್ತಿದ್ದಳು. ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದು, ನಿನ್ನ ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ನಿನಗೆ ಸರ್ಕಾರಿ ಕೆಲಸವೂ ಸಿಗಬಹುದು ಎಂದು ನಂಬಿಸಿ, ಅಪ್ರಾಪ್ತೆಯ ಮೇಲೆ...
ಅಂಕಣಬೆಂಗಳೂರುಸುದ್ದಿ

ಈ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ ; ಸುನಿಲ್ ಕುಮಾರ್ ಕಿಡಿ-ಕಹಳೆ ನ್ಯೂಸ್

ಬೆಂಗಳೂರು: ಕ್ರಿಸ್ಚಿಯನ್ ಜೊತೆ 42 ಹಿಂದೂ ಉಪಚಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನು ಈ ಸರ್ಕಾರ ಸೃಷ್ಟಿ ಮಾಡಿದೆ ಎಂದು ಶಾಸಕ ಸುನಿಲ್ ಕುಮಾರ್  ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಸುನಿಲ್ ಕುಮಾರ್ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿ ತರಾತುರಿಯಲ್ಲಿ ಜಾತಿ ಸಮೀಕ್ಷೆ ನಡೀತಿದೆ. ಹೊಸದಾಗಿ ಜಾತಿಗಳ ಪಟ್ಟಿ ಸೃಷ್ಟಿ ಮಾಡಿದ್ದಾರೆ. ಇವಕ್ಕೆ ಸರ್ಕಾರದ ಯಾವುದೇ ದಾಖಲೆಗಳಿಲ್ಲ. ಕ್ರಿಶ್ಚಿಯನ್ ಜತೆ 47 ಹಿಂದೂ ಉಪಜಾತಿಗಳನ್ನು ಸೇರಿಸಿ ಹೊಸ ಜಾತಿಗಳ ಸೃಷ್ಟಿ ಮಾಡಿದ್ದಾರೆ. ಇದರ...
ಬೆಂಗಳೂರುರಾಜ್ಯಸುದ್ದಿಹೆಚ್ಚಿನ ಸುದ್ದಿ

ಬೆಂಗಳೂರಲ್ಲಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಸೈಬರ್ ಸೆಂಟರ್ ಮೇಲೆ ಪೊಲೀಸರು ದಾಳಿ : ಇಬ್ಬರು ಅರೆಸ್ಟ್ -ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ದಾಖಲೆ ಸೃಷ್ಟಿ ಮಾಡುತಿದ್ದವರ ಸೆಂಟರ್ ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸೆಂಟರ್ ಗಳ ಮೇಲೆ ದಾಳಿ ನಡೆಸಿ, ನಕಲಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆಧಾರ್ ಕಾರ್ಡ್ ಮಾರ್ಕ್ಸ್ ಕಾರ್ಡ್ ಎಲ್ಲಾ ಫೋರ್ಜರಿ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಯಶವಂತ್ (20) ಹಾಗೂ ರಘುವೀರ್ (26) ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೈಬರ್...
ದೆಹಲಿರಾಜ್ಯಸುದ್ದಿ

ಮಾದಕ ದ್ರವ್ಯದ ಪಿಡುಗನ್ನು ದೇಶದಿಂದ ತೊಡೆದುಹಾಕಲು ಮೋದಿ ಸರ್ಕಾರ ಬದ್ಧ: ಅಮಿತ್ ಶಾ -ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಿಂದ ಎಲ್ಲ ರೀತಿಯ ಮಾದಕ ದ್ರವ್ಯವನ್ನು ತೊಲಗಿಸಲು ಕಟಿಬದ್ಧವಾಗಿದ್ದು, ಈ ಗುರಿ ಸಾಧನೆಗೆ ಎಲ್ಲ ಪ್ರಯತ್ನ ನಡೆಸುತ್ತಿರುವುದಾಗಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಯ(ಎಎನ್‌ಟಿಎಫ್) ಮುಖ್ಯಸ್ಥರ ಎರಡನೇ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಾಚರಣೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಯಶಸ್ಸು ಪಡೆಯಲು ಮಾದಕ...
ಜಿಲ್ಲೆಬೆಂಗಳೂರುರಾಜ್ಯಸುದ್ದಿಹೆಚ್ಚಿನ ಸುದ್ದಿ

ಬಸ್‌ ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಜನರ ಜೀವವುಳಿಸಿ ಸಾವನ್ನಪ್ಪಿದ ಚಾಲಕ -ಕಹಳೆ ನ್ಯೂಸ್

ನೆಲಮಂಗಲ: KSRTC ಬಸ್ ಡ್ರೈವರ್ ಗೆ ಎದೆನೋವು (chest pain ) ಕಾಣಿಸಿಕೊಂಡ ಹಿನ್ನೆಲೆ ಬಸ್ ನಿಲ್ಲಿಸಿ ಚಾಲಕನೊಬ್ಬ ದೊಡ್ಡ ಅನಾಹುತ ತಪ್ಪಿಸಿದ್ದಾನೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಚಾಲಕರೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಆದ್ರೆ, ದುರಾದೃಷ್ಟವಷಾತ್ ಚಾಲಕ ಉತ್ತರ ಕರ್ನಾಟಕ ಮೂಲದ ರಾಜೀವ್ ಬಿರಾದಾರ್ (50) ಮೃತಪಟ್ಟಿದ್ದಾರೆ. ರಾಜೀವ್ ಬೆಂಗಳೂರಿಂದ ಹರಿಹರಕ್ಕೆ ಹೋಗುತ್ತಿದ್ದ ಕೆಎಸ್‌ಆರ್​​ಟಿಸಿ ರಾಜಹಂಸ ಬಸ್ ಚಲಾಯಿಸುತ್ತಿದ್ದರು.ನೆಲಮಂಗಲದ ಜಾಸ್...
1 73 74 75 76 77 320
Page 75 of 320