ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಹಗರಣ ನಡೆದಿದೆ – ವಿಜಯೇಂದ್ರ, ಆರ್. ಅಶೋಕ್ ಬಾಂಬ್ – ಕಹಳೆ ನ್ಯೂಸ್
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 6 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾತನಾಡಿದ ಶಾಸಕ ವಿಜಯೇಂದ್ರ, ಸಿದ್ದರಾಮಯ್ಯ ಸರ್ಕಾರ ಬಹಳ ಬಂಡತನದಿಂದ ನಡೆದುಕೊಳ್ಳುತ್ತಿದೆ. ಹಗರಣಗಳ ಅಲೆಯಲ್ಲಿ ಸಿಲುಕಿಕೊಂಡಿದೆ. ಅಬಕಾರಿ ಇಲಾಖೆವರೆಗೂ (Excise Department) ಬಂದು ತಲುಪಿದೆ. ಮನಸೋ ಇಚ್ಛೆ ಬೇಕಾಬಿಟ್ಟಿ ಲಿಕ್ಕರ್ ಲೆಸೆನ್ಸ್ ಕೊಡ್ತಾ ಇದ್ದಾರೆ. ಇಷ್ಟು ಭ್ರಷ್ಟಾಚಾರ...







