ಪಂಜಾಬ್ ನಲ್ಲಿ ಗಡಿ ದಾಟುತ್ತಿದ್ದ ನುಸುಳುಕೋರ: ಬಿಎಸ್‌ಎಫ್ ನಿಂದ ಗುಂಡಿಕ್ಕಿ ಹತ್ಯೆ-ಕಹಳೆ ನ್ಯೂಸ್
ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ಗುಂಡಿಕ್ಕಿ ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 7-8ರ ಮಧ್ಯರಾತ್ರಿ ಫಿರೋಜ್‌ಪುರ ವಲಯದಲ್ಲಿ ವ್ಯಕ್ತಿಗೆ ಗುಂಡು ಹಾರಿಸಲಾಗಿದೆ. ಕತ್ತಲೆಯಲ್ಲಿ ಉದ್ದೇಶಪೂರ್ವಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟುತ್ತಿದ್ದಾಗ ಆತ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದು, ಶವವನ್ನು ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅಪ್ರಚೋದಿತ ಶೆಲ್ ದಾಳಿಯಲ್ಲಿ ತೊಡಗಿದ್ದು, ಗಡಿ ನಿಯಂತ್ರಣ ರೇಖೆ ಮತ್ತು...



