
ಭಾರತದ ಆಪರೇಷನ್ ಸಿಂಧೂರ್ ವಾಯುದಾಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದು “ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ. ಅದಲ್ಲದೆ ಭಾರತ ಮತ್ತು ಪಾಕಿಸ್ತಾನಗಳು ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸಿರುವ ಟ್ರಂಪ್ “ಎರಡು ಪ್ರಬಲ ರಾಷ್ಟ್ರಗಳು ಯುದ್ಧದ ಹಾದಿಯಲ್ಲಿ ಸಾಗುವುದನ್ನು ಯಾರೂ ನೋಡಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.












