ನ್ಯೂ ಇಯರ್: ದೇವಸ್ಥಾನಕ್ಕೆ ಹೋಗಿ ಬೈಕ್‌ನಲ್ಲಿ ಬರ್ತಿದ್ದ ಕುಟುಂಬ – ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು – ಕಹಳೆ ನ್ಯೂಸ್
ನೆಲಮಂಗಲ: ಹೊಸ ವರ್ಷದ ಹಿನ್ನೆಲೆ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು, ಬೈಕ್‌ನಲ್ಲಿದ್ದ ಕುಟುಂಬದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಅಶ್ವಿನಿ ಸಾವಿಗೀಡಾದ ದುರ್ದೈವಿ. ನೆಲಮಂಗಲ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಲಕ್ಕೇನಹಳ್ಳಿ ಬಳಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ತೊರೆ ಮೂಡಲಪಾಳ್ಯ ನಿವಾಸಿಗಳಾದ ಅಶ್ವಿನಿ ಮತ್ತು ರಮೇಶ್ ದಂಪತಿ ತಮ್ಮ 2ನೇ ಮಗನ ಜೊತೆ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ....







