ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಂಡದಿಂದ ಭಾಸ್ಕರ್ ನಾಯ್ಕ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ : ಪೋಲೀಸರ ನಡೆಗೆ ಅಸಮಾಧಾನ, ಮೂರು ದಿನದ ಒಳಗೆ ( ಸೆ.15 ) ತನಿಖಾ ವರದಿ ಸಲ್ಲಿಸಲು ಪೋಲೀಸರಿಗೆ ಖಡಕ್ ಸೂಚನೆ ನೀಡಿದ ಹೈಕೋರ್ಟ್ – ಕಹಳೆ ನ್ಯೂಸ್
ಬೆಂಗಳೂರು : ಸೌಜನ್ಯ ಪ್ರಕರಣದ ವಿವಾದ ತಾರಕಕ್ಕೇರಿದ್ದು, ಸುಳ್ಳು ಆರೋಪ ಪ್ರತ್ಯಾರೋಪ ಮುಗಿಲುಮುಟ್ಟಿದೆ. ಈ ನಡುವೆ ಖಾಸಗಿ ಯುಟೂಬ್ ವಾಹಿನಿಯೊಂದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮುಂಬೈಯಲ್ಲಿನ ಅಕ್ರಮಗಳ ಬಗ್ಗೆ ಮಾತನಾಡಿದ ಭಾಸ್ಕರ್ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆಯನ್ನು ತಿಮರೋಡಿ ಮತ್ತು ತಂಡದವರು ನಡೆಸಿದ್ದಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದ್ದು, ಈ ಬಗ್ಗೆ ಒಂದು ವಾರಕಳೆದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಆರೋಪಿಗಳು ರಾಜರೋಶವಾಗಿ ತಿರುಗುತ್ತಿದ್ದು,...






