ಬರ್ತ್ಡೇ ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲವೆಂದು ಗಂಡನನ್ನೇ ಕೊಂದ ಪತ್ನಿ! – ಕಹಳೆ ನ್ಯೂಸ್
ನವದೆಹಲಿ: ತನ್ನ ಬರ್ತ್ಡೇ ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲವೆಂದು ಗಂಡನನ್ನೇ ಹೆಂಡತಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ನಿಖಿಲ್ ಖನ್ನಾ (36) ಕೊಲೆಯಾದ ವ್ಯಕ್ತಿ. 38 ವರ್ಷದ ರೇಣುಕಾ ಪತಿಯನ್ನೇ ಕೊಲೆ ಮಾಡಿರುವ ಆರೋಪಿ. ಪುಣೆಯ ವನವಾಡಿಯಲ್ಲಿರುವ ಪೋಶ್ ರೆಸಿಡೆನ್ಶಿಯಲ್ ಸೊಸೈಟಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಖನ್ನಾರ ಮೂಗಿಗೆ ಬಲವಾಗಿ ಗುದ್ದಿದ ಪರಿಣಾಮ ಅವರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆಂದು...







