Recent Posts

Monday, June 8, 2026
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ – ನಿರ್ಬಂಧ ಮೀರಿ ಗರ್ಭಗುಡಿಯ ಪೋಟೋ ತೆಗೆದ ಆರೋಪ – ಪೋಲೀಸ್ ಠಾಣೆಯಲ್ಲಿ ದೂರು ದಾಖಲು – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ ಹಾಗೂ ಗರ್ಭಗುಡಿಯ ಪೋಟೋ ತೆಗೆದ ಆರೋಪದಡಿ ಕುಲ್ಕುಂದದ ಶ್ರೀನಾಥ್ ಭಟ್ ಎಂಬವರ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತು

ಈ ಬಗ್ಗೆ ದೂರು ನೀಡಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವರ್ಗದವರು ಹಾಗೂ ಒಳಾಂಗಣ ನೌಕರರು ದೂರು ನೀಡಿದ್ದಾರೆ. ದೂರಿನಲ್ಲಿ ಶ್ರೀನಾಥ್ ಭಟ್ ಎಂಬವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯ ಫೋಟೋ ತೆಗೆಯುಲು ನಿಷೇಧವಿದ್ದರೂ ಗರ್ಭ ಗುಡಿಯ ಪೋಟೋ ತೆಗೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಈ ಫೋಟೋವನ್ನು ಕುಕ್ಕೆ ಶ್ರೀ ದೇವಾಲಯ ಉಳಿಸಿ, ಶೈವಾಗಮ ಕ್ಷೇತ್ರ ಶ್ರೀ ಕುಕ್ಕೆ ವಾಟ್ಸಾಪ್ ಗ್ರೂಪ್ ಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಲ್ಲದೆ ಅರ್ಚಕರು, ಪುರೋಹಿತರನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳನ್ನು, ನಿಂಧನಾತ್ಮಕವಾಗಿ ಬರೆದು ಇಲ್ಲಿನ ಅರ್ಚಕರನ್ನು ತೇಜೋವಧೆ ಮಾಡುವ ಬರಹಗಳನ್ನು ಬರೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.