ವಿದೇಶದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್ ಕಾರ್ಡ್ಗಳನ್ನು ಸಂಗ್ರಹ – 86 ಸಿಮ್ ಸಹಿತ ಬೆಳ್ತಂಗಡಿಯ ಶಮದ್ ಮಹಮ್ಮದ್ ಸಮರ್ ಮತ್ತು ಮಹಮ್ಮದ್ ಅಜೀಂನನ್ನು ಬಂಧಿಸಿದ ಮಂಗಳೂರು ಪೊಲೀಸರು-ಕಹಳೆ ನ್ಯೂಸ್
ಬೆಳ್ತಂಗಡಿ : ವಿದೇಶದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್ ಕಾರ್ಡ್ಗಳನ್ನು ಸಂಗ್ರಹಿಸುತ್ತಿದ್ದ, ಆರೋಪದಲ್ಲಿ ಬೆಳ್ತಂಗಡಿಯ ಒಬ್ಬ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಮಂಗಳೂರು ನಗರ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳಿಂದ ಏರ್ಟೆಲ್ ಕಂಪೆನಿಯ 86 ಸಿಮ್ ಕಾರ್ಡ್ಗಳು , 2 ಮೊಬೈಲ್ ಪೋನ್ಗಳು, ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ನಿವಾಸಿ ಗಳಾದ ಶಮದ್ ಮಹಮ್ಮದ್ ಸಮರ್ (26ವ) ಮತ್ತು...







