Friday, March 6, 2026

ಕ್ರೀಡೆ

ಕ್ರೀಡೆರಾಜ್ಯರಾಷ್ಟ್ರೀಯಸುದ್ದಿ

ಅಗ್ರಸ್ಥಾನದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ರೋಹಿತ್ – ಕಹಳೆ ನ್ಯೂಸ್

ದುಬೈ: ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಐಸಿಸಿ ಪುರುಷರ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿಗೆ ನಂ.1 ಸ್ಥಾನ ಅಲಂಕರಿಸಿದ್ದಾರೆ. ರೋಹಿತ್ ತಮ್ಮ 38 ವರ್ಷ 182 ದಿನಗಳ ಬದುಕಿನಲ್ಲಿ ಈ ಸಾಧನೆ ಮಾಡುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಶರ್ಮಾ ಎರಡನೇ ಪಂದ್ಯದಲ್ಲಿ 73 ರನ್ ಹಾಗೂ...
ಕ್ರೀಡೆದೆಹಲಿಸುದ್ದಿ

ಆಂತರಿಕ ರಕ್ತಸ್ರಾವ: ಶ್ರೇಯಸ್ ಅಯ್ಯರ್ ಸಿಡ್ನಿ ಆಸ್ಪತ್ರೆಗೆ ದಾಖಲು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದ ವೇಳೆ ಪಕ್ಕೆಲುಬು ಪಂಜರದ ಗಾಯದಿಂದಾಗಿ ಆಂತರಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಭಾರತದ ಏಕದಿನ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡಲು ಬ್ಯಾಕ್ ವರ್ಡ್ ಪಾಯಿಂಟ್ ನಿಂದ ಹಿಂದಕ್ಕೆ ಓಡಿದ ಅದ್ಭುತ ಕ್ಯಾಚ್ ಪಡೆದಿದ್ದ ಅಯ್ಯರ್, ಈ ಪ್ರಕ್ರಿಯೆಯಲ್ಲಿ ಅವರ ಎಡ ಪಕ್ಕೆಲುಬಿನ ಪಂಜರಕ್ಕೆ ಗಾಯವಾಗಿದೆ ಮತ್ತು ಶನಿವಾರ ಡ್ರೆಸ್ಸಿಂಗ್ ರೂಮ್ ಗೆ ಮರಳಿದ ಕೂಡಲೇ...
ಅಂಕಣಅಂತಾರಾಷ್ಟ್ರೀಯಕ್ರೀಡೆಸುದ್ದಿ

17 ವರ್ಷಗಳ ವೃತ್ತಿಜೀವನದಲ್ಲಿ ; ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ-ಕಹಳೆ ನ್ಯೂಸ್

ಅಡಿಲೇಡ್: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿ ವಿರಾಟ್‌ ಕೊಹ್ಲಿ  ಕೆಟ್ಟ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ನಾಯಕ ಶುಭಮನ್‌ ಗಿಲ್‌ 9 ರನ್‌ ಗಳಿಸಿ ಬಾರ್ಟ್ಲೆಟ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಕೊಹ್ಲಿ 4 ಎಸೆತ ಎದುರಿಸಿ ಎಲ್‌ಬಿಗೆ ಔಟಾದರು. ಈ ಮೂಲಕ 17 ರನ್‌ಗಳಿಗೆ ಎರಡು ಅಮೂಲ್ಯ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತು. ಅ.19...
ಕ್ರೀಡೆಮುಂಬೈಸುದ್ದಿ

ಏಷ್ಯಾಕಪ್‌ ವಿವಾದದ ; ಬೆನ್ನಲ್ಲೇ ನವೆಂಬರ್‌ನಲ್ಲಿ ಪಾಕ್‌ ವಿರುದ್ಧ ಆಡಲಿದೆ ಭಾರತ-ಕಹಳೆ ನ್ಯೂಸ್

ಮುಂಬೈ: ಹ್ಯಾಂಡ್‌ಶೇಕ್‌, ಏಷ್ಯಾ ಕಪ್‌  ವಿವಾದದ ಬೆನ್ನಲ್ಲೇ ಮತ್ತೆ ಭಾರತ ಮತ್ತು ಪಾಕಿಸ್ತಾನದ  ಮಧ್ಯೆ ಕ್ರಿಕೆಟ್‌ ಪಂದ್ಯ ನಡೆಯಲಿದೆ. ಇದೇ ನ. 7 ರಿಂದ 9 ರವರೆಗೆ ಈ ಟೂರ್ನಿ ಹಾಂಕಾಂಗ್‌ನಲ್ಲಿ ನಡೆಯಲಿದೆ. ಹಾಂಕಾಂಗ್‌ ಕ್ರಿಕೆಟ್‌ ಸಿಕ್ಸಸ್‌  ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಕುವೈತ್‌ ಒಂದೇ ಗುಂಪಿನಲ್ಲಿದೆ. ಹಾಂಕಾಂಗ್‌ ಸಿಕ್ಸಸ್ ಆರು ಓವರ್‌ ಪಂದ್ಯಾವಳಿಯಾಗಿದ್ದು, ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಭಾರತವನ್ನು ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ. ಕಾರ್ತಿಕ್‌...
ಕ್ರೀಡೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಮಿಂಚಿದ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ – ಕಹಳೆ ನ್ಯೂಸ್

1956 ರಲ್ಲಿ ಮೊದಲ ಭಾರತೀಯ ಒಲಂಪಿಕ್ ಈಜುಪಟು ದಿವಂಗತ ಶ್ರೀ ಮಹಬೂಬ್ ಶಂಶೇರ್ ಖಾನ್ ಇವರ ಸವಿ ನೆನಪಿಗಾಗಿ ಮಾಸ್ಟರ್ ಅಕ್ವಾಟಿಕ್ ಫಡೋರೇಶನ್ ಆಫ್ ಇಂಡಿಯಾದ ಸಹಯೋಗದಲ್ಲಿ "ನ್ಯಾಷನಲ್ ಮಾಸ್ಟರ್ ಅಕ್ವಾಟಿಕ್ ಚಾಂಪಿಯನ್ಶಿಪ್ 2025" ಮಂಗಳಗಿರಿ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ ರವರು ಶ್ಲಾಘನೀಯ ಪ್ರದರ್ಶನವನ್ನು ನೀಡುವುದರೊಂದಿಗೆ ತಾವು ಭಾಗವಹಿಸಿದ ಐದು ಸ್ಪರ್ಧೆಗಳಾದ 200ಮೀ. ಫ್ರೀ ಸ್ಟೈಲ್ ,...
ಕ್ರೀಡೆದಕ್ಷಿಣ ಕನ್ನಡಬೆಂಗಳೂರುಯಕ್ಷಗಾನ / ಕಲೆರಾಜಕೀಯರಾಜ್ಯಸುದ್ದಿ

ರಾಜ್ಯ ಸರ್ಕಾರದಿಂದ `ಕಂಬಳ’ ಕ್ರೀಡೆಗೆ ಅಧಿಕೃತ ಮಾನ್ಯತೆ : `ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ರಚನೆ.!- ಕಹಳೆ ನ್ಯೂಸ್

ಮಂಗಳೂರು : ರಾಜ್ಯ ಸರ್ಕಾರವು ಕಂಬಳ ಕ್ರೀಡೆಗೆ ಅಧಿಕೃತ ಮಾನ್ಯತೆ ನೀಡಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ 'ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್' ರಚಿನೆಗೆ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಕಂಬಳ ಅಸೋಸಿಯೇಷನ್ಗೆ ಮೂರು ವರ್ಷದ ಅವಧಿ ಅಥವಾ ಮುಂದಿನ ಆದೇಶದವರೆಗೆ ಮಾನ್ಯತೆ ನೀಡಲಾಗಿದೆ. ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಅ.15ರಂದು ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕಂಬಳ ಅಸೋಸಿಯೇಷನ್ನ ಬೈಲಾದ ಕರಡು ಪ್ರತಿ ಅನುಮೋದನೆ ಸಿಗಲಿದೆ....
ಅಂಕಣಅಂತಾರಾಷ್ಟ್ರೀಯಕ್ರೀಡೆಸುದ್ದಿ

ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ ; ಗೆದ್ರೂ ಟ್ರೋಫಿ ಇಲ್ಲದೇ ಸಂಭ್ರಮಿಸಿದ ಭಾರತ!- ಕಹಳೆ ನ್ಯೂಸ್

ದುಬೈ: ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ನೆರವಿನಿಂದ ಏಷ್ಯಾಕಪ್  ಫೈನಲ್‌ನಲ್ಲಿ ಪಾಕಿಸ್ತಾನವನ್ನು  5 ವಿಕೆಟ್‌ಗಳ ಅಂತರದಿಂದ ಮಣಿಸಿದ ಭಾರತ  ಪಹಲ್ಗಾಮ್ ದಾಳಿಗೆ ಪಿಚ್‌ನಲ್ಲೂ ಪ್ರತೀಕಾರ ತೀರಿಸಿಕೊಂಡಿದೆ. ಆ ಬಳಿಕ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ಪಾಕಿಸ್ತಾನದ ಸಚಿವ ಹಾಗೂ ಏಷ್ಯಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ನಖ್ವಿಯಿಂದ ಕಪ್‌ ಸ್ವೀಕಾರಕ್ಕೆ ಭಾರತ ನಿರಾಕರಿಸಿದೆ. ಕಪ್‌ ಇಲ್ಲದೆಯೂ ಪಿಚ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ದಾರೆ. ಚೆಕ್‌ ಹರಿದು ಎಸೆದ ಸಲ್ಮಾನ್‌ ಪಂದ್ಯ ಮುಗಿದ...
ಅಂಕಣಅಂತಾರಾಷ್ಟ್ರೀಯಕ್ರೀಡೆಸುದ್ದಿ

Asia Cup 2025 ; ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌- ಕಹಳೆ ನ್ಯೂಸ್

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾ ಕಪ್  ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ. ಇದಲ್ಲದೇ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನಿಂದ ಚಾಂಪಿಯನ್‌ ತಂಡಕ್ಕೆ 2.6 ಕೋಟಿ ರೂ. ಟೂರ್ನಿಯ ಬಹುಮಾನ ಸಿಕ್ಕಿದೆ. ರನ್ನರ್‌ ಅಪ್‌ ಪಾಕಿಸ್ತಾನ ತಂಡ ಕೇವಲ 1.3 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ಮೈದಾನದಲ್ಲಿ ಭಾರೀ ಹೈಡ್ರಾಮಾ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ  ವಿರುದ್ಧ...
1 2 3 4 5 36
Page 3 of 36