Thursday, March 12, 2026

ಅಂಕಣ

ಅಂಕಣಅಂತಾರಾಷ್ಟ್ರೀಯಸಿನಿಮಾ

ವಿದೇಶಿ ಸಿನಿಮಾಗಳ ; ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌-ಕಹಳೆ ನ್ಯೂಸ್

ವಾಷಿಂಗ್ಟನ್: ಭಾರತ ಸೇರಿದಂತೆ ವಿದೇಶಗಳ ಮೇಲಿನ ಟ್ರಂಪ್‌ ಸುಂಕ ಸಮರ ಮುಂದುವರಿದಿದೆ. ವಿದೇಶಗಳ ಸಿನಿಮಾಗಳ ಮೇಲೆ ಶೇ.100 ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಅಮೆರಿಕವು ತನ್ನ ದೇಶದ ಹೊರಗೆ ತಯಾರಾಗುವ ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕವನ್ನು ವಿಧಿಸುತ್ತದೆ ಎಂದು ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಘೋಷಿಸಿದ್ದಾರೆ. ಅಮೆರಿಕದ ಚಲನಚಿತ್ರ ವ್ಯವಹಾರವನ್ನು ವಿದೇಶಗಳ ಸ್ಪರ್ಧಿಗಳು ಆಕ್ರಮಿಸಿಕೊಂಡಿದ್ದಾರೆ. ಮಕ್ಕಳಿಂದ ಕ್ಯಾಂಡಿ ಕದಿಯುವ ರೀತಿಯಲ್ಲಿ ಅಮೆರಿಕದ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ಇತರೆ...
ಅಂಕಣಬೆಂಗಳೂರುಸುದ್ದಿ

ಆನ್‌ಲೈನ್ ಬೆಟ್ಟಿಂಗ್‌ಗಾಗಿ ಬಡವರ ಹಣಕ್ಕೆ ಕನ್ನ ; 10 ಲಕ್ಷ ವಂಚಿಸಿ ಪರಾರಿಯಾದ ಪೋಸ್ಟ್ ಮಾಸ್ಟರ್-ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ: ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿ ಬಡವರ ಹಣಕ್ಕೆ ಕನ್ನ ಹಾಕಿ ಪರಾರಿಯಾಗಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪೈಲಗುರ್ಕಿ ಗ್ರಾಮದ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೋಸ್ಟ್ ಮಾಸ್ಟರ್ ನಿಂಗೇಶ್ ಎಂಬಾತ ಬಡವರ ಹಣವನ್ನೇ ಆನ್‌ಲೈನ್ ಬೆಟ್ಟಿಂಗ್‌ಗೆ ಹಾಕಿ ಕೈ ಸುಟ್ಟುಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಚಿಕ್ಕಪೈಲಗುರ್ಕಿ ಅಂಚೆ ಕಚೇರಿಗೆ 13 ಹಳ್ಳಿಗಳು ಸೇರಿದ್ದು, ನೂರಾರು ಮಂದಿ ಹಳ್ಳಿ ಜನ ದುಡಿದ ಹಣವನ್ನ ಅಂಚೆ ಕಚೇರಿಯ ಖಾತೆಗಳಲ್ಲಿ...
ಅಂಕಣಬೆಂಗಳೂರುಸುದ್ದಿ

ನಂಬರ್‌ ಪ್ಲೇಟ್‌ ; ಇಲ್ಲದೇ ವಾಹನ ರಸ್ತೆಗಿಳಿಸಿದ್ರೆ ದಾಖಲಾಗುತ್ತೆ 420 ಕೇಸ್‌!-ಕಹಳೆ ನ್ಯೂಸ್

ಬೆಂಗಳೂರು: ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿದ್ರೆ ಸೆಕ್ಷನ್‌ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಲು ಬೆಂಗಳೂರು   ಪೊಲೀಸರು ಮುಂದಾಗಿದ್ದಾರೆ. ನಂಬರ್‌ ಪ್ಲೇಟ್‌ ಇಲ್ಲದ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ಯಾಕೆ ಇಷ್ಟು ಕಠಿಣ ಕ್ರಮ ಎಂದರೆ, ಕೆಲವರು ಸಂಚಾರಿ ನಿಯಮ ಉಲ್ಲಂಘನೆ ಮರೆಮಾಚಲು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಕೆಲ ಪುಂಡರು ವಾಹನಗಳಿಗೆ ನಂಬರ್ ಪ್ಲೇಟ್ ಹಾಕದೆ, ನಂಬರ್ ಪ್ಲೇಟ್ ವಿಕಾರಗೊಳಿಸಿ ಓಡಾಡುತ್ತಿದ್ದಾರೆ. ಅಂತವರನ್ನು ಮಟ್ಟ ಹಾಕಲು ಪೊಲೀಸರು ಕಠಿಣ...
ಅಂಕಣಅಂತಾರಾಷ್ಟ್ರೀಯಕ್ರೀಡೆಸುದ್ದಿ

ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ ; ಗೆದ್ರೂ ಟ್ರೋಫಿ ಇಲ್ಲದೇ ಸಂಭ್ರಮಿಸಿದ ಭಾರತ!- ಕಹಳೆ ನ್ಯೂಸ್

ದುಬೈ: ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ನೆರವಿನಿಂದ ಏಷ್ಯಾಕಪ್  ಫೈನಲ್‌ನಲ್ಲಿ ಪಾಕಿಸ್ತಾನವನ್ನು  5 ವಿಕೆಟ್‌ಗಳ ಅಂತರದಿಂದ ಮಣಿಸಿದ ಭಾರತ  ಪಹಲ್ಗಾಮ್ ದಾಳಿಗೆ ಪಿಚ್‌ನಲ್ಲೂ ಪ್ರತೀಕಾರ ತೀರಿಸಿಕೊಂಡಿದೆ. ಆ ಬಳಿಕ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ಪಾಕಿಸ್ತಾನದ ಸಚಿವ ಹಾಗೂ ಏಷ್ಯಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ನಖ್ವಿಯಿಂದ ಕಪ್‌ ಸ್ವೀಕಾರಕ್ಕೆ ಭಾರತ ನಿರಾಕರಿಸಿದೆ. ಕಪ್‌ ಇಲ್ಲದೆಯೂ ಪಿಚ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ದಾರೆ. ಚೆಕ್‌ ಹರಿದು ಎಸೆದ ಸಲ್ಮಾನ್‌ ಪಂದ್ಯ ಮುಗಿದ...
ಅಂಕಣಕ್ರೈಮ್ಸುದ್ದಿ

TVK Vijay Rally Stampede ; ಮದ್ರಾಸ್‌ ಹೈಕೋರ್ಟ್‌ನಲ್ಲಿಂದು ವಿಚಾರಣೆ – ಸಾವಿನ ಸಂಖ್ಯೆ 41ಕ್ಕೆ ಏರಿಕೆ- ಕಹಳೆ ನ್ಯೂಸ್

– ಸಿಬಿಐ ತನಿಖೆಗೆ ಆಗ್ರಹಿಸಿ ಕೋರ್ಟ್‌ ಮೆಟ್ಟಿಲೇರಿದ್ದ ನಟ ವಿಜಯ್‌ & ಟೀಂ ಚೆನ್ನೈ: ಕರೂರು ರಾಜಕೀಯ ರ‍್ಯಾಲಿವೇಳೆ ಸಂಭವಿಸಿದ ಕಾಲ್ತುಳಿತ ದುರಂತದ  ಬಗ್ಗೆ ಸ್ವತಂತ್ರ ತನಿಖೆ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ ದಳಪತಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ ನಡೆಯಲಿದೆ. ವಿಜಯ್ ಅವರ ಪರವಾಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಕಾನೂನು ತಂಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮದ್ರಾಸ್‌ ಹೈಕೋರ್ಟ್‌ನಲ್ಲಿ...
ಅಂಕಣಅಂತಾರಾಷ್ಟ್ರೀಯಕ್ರೀಡೆಸುದ್ದಿ

Asia Cup 2025 ; ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌- ಕಹಳೆ ನ್ಯೂಸ್

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾ ಕಪ್  ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ. ಇದಲ್ಲದೇ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನಿಂದ ಚಾಂಪಿಯನ್‌ ತಂಡಕ್ಕೆ 2.6 ಕೋಟಿ ರೂ. ಟೂರ್ನಿಯ ಬಹುಮಾನ ಸಿಕ್ಕಿದೆ. ರನ್ನರ್‌ ಅಪ್‌ ಪಾಕಿಸ್ತಾನ ತಂಡ ಕೇವಲ 1.3 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ಮೈದಾನದಲ್ಲಿ ಭಾರೀ ಹೈಡ್ರಾಮಾ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ  ವಿರುದ್ಧ...
ಅಂಕಣಮುಂಬೈಸುದ್ದಿ

ಮುಂಬೈ ಸೇರಿ ಹಲವೆಡೆ ಭಾರೀ ಮಳೆ ; ಆರೆಂಜ್ ಅಲರ್ಟ್ ಘೋಷಣೆ-ಕಹಳೆ ನ್ಯೂಸ್

ಮುಂಬೈ: ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂಬೈನಲ್ಲಿ ಗುಡುಗು, ಮಿಂಚು ಸಹಿತ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಪಾಲ್ಘರ್, ಪುಣೆ, ಥಾಣೆ ಮತ್ತು ರಾಯಗಡ್ ಸೇರಿದಂತೆ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಜಲ್ನಾ, ಬೀಡ್ ಮತ್ತು ಸೋಲಾಪುರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ...
ಅಂಕಣಸುದ್ದಿ

ಒಡಿಶಾ ; 60,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗೆ ಮೋದಿ ಚಾಲನೆ-ಕಹಳೆ ನ್ಯೂಸ್

ಭುವನೇಶ್ವರ್‌: ಪ್ರಧಾನಿ ನರೇಂದ್ರ ಮೋದಿಯವರು ಒಡಿಶಾದ  ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡುವಾಗ ಮಕ್ಕಳು ಹಿಡಿದಿದ್ದ ಚಿತ್ರಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಧಾನಿಗಳು ಉದ್ಘಾಟಿಸಿದ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಅಭಿವೃದ್ಧಿ ಯೋಜನೆಗಳಲ್ಲಿ ದೂರಸಂಪರ್ಕ, ರೈಲ್ವೆ, ಉನ್ನತ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಗ್ರಾಮೀಣ ವಸತಿ ಕ್ಷೇತ್ರಗಳು ಸೇರಿದಂತೆ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ....
1 14 15 16 17 18 43
Page 16 of 43