Thursday, March 19, 2026
ಸುದ್ದಿ

ಜ್ವರದಿಂದ ಬಳಲುತ್ತಿದ್ದ 31 ವರ್ಷದ ಯುವಕ ಸಾವು – ಕಹಳೆ ನ್ಯೂಸ್

ಪುಣಚ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪುಣಚದಲ್ಲಿ ನಡೆದಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಬೈಲುಪಾದೆ ಲಿಯೋ ಡಿಸೋಜರವರ ಮಗ ರಿತೇಶ್ ಡಿಸೋಜ (31 ವ.) ಮೃತಪಟ್ಟ ಯುವಕ.

ಜಾಹೀರಾತು
ಜಾಹೀರಾತು

ಅವಿವಾಹಿತರಾಗಿದ್ದ ರಿತೇಶ್ ಡಿಸೋಜರವರಿಗೆ ಸೆ.30ರಂದು ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿoದ ಸ್ಥಳಿಯ ಆಸ್ಪತ್ರೆಯಲ್ಲಿ ಮದ್ದು ಮಾಡಿದ್ದರು. ಆದರೂ ಜ್ವರ ಕಡಿಮೆಯಾಗಿರಲಿಲ್ಲ. ಅ.4ರಂದು ಬೆಳಿಗ್ಗೆ 5 ಗಂಟೆಯ ಸಮಯಕ್ಕೆ ಅವರಿಗೆ ತೀವ್ರ ಜ್ವರ ಉಲ್ಬಣಗೊಂಡಿದ್ದರಿAದ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ,ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ರಿತೇಶ್ ಡಿಸೋಜರವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಮೃತರ ತಂದೆ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.