
ಉಳ್ಳಾಲ : ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಎಂಡಿಎoಎ ಮಾರಾಟ ಮಾಡುತ್ತಿದ್ದವರನ್ನು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬoಧಿತರನ್ನು ಕೇರಳ ತ್ರಿಶೂರು ಮೂಲದ ತನ್ವೀರ್ ಮತ್ತು ಕೋಝಿಕೋಡ್ ಮೂಲದ ಸಾಯಿಕೃಷ್ಣ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ತನ್ವೀರ್ ವಶದಲ್ಲಿದ್ದ 1.42 ಗ್ರಾಂ ಎಂಡಿಎAಎ ಮತ್ತು ಒಂದು ಮೊಬೈಲ್ ಹಾಗೂ ಸಾಯಿಕೃಷ್ಣ ಎಂಬಾತನ ವಶದಲ್ಲಿದ್ದ 1.35 ಗ್ರಾಂ ಎಂಡಿಎAಎ, ಮೊಬೈಲ್ ಸಹಿತ ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಒಟ್ಟು ಸೊತ್ತುಗಳ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















