Wednesday, March 18, 2026
ಸುದ್ದಿ

ಅತೀ ಉದ್ದ ಕೂದಲು ಬೆಳೆಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ಭಾರತೀಯ ಬಾಲಕ – ಕಹಳೆ ನ್ಯೂಸ್

ಮಂಗಳೂರು : ಅತೀ ಉದ್ದ ಕೂದಲು ಬೆಳೆಸಿ ಭಾರತೀಯ ಬಾಲಕ ಗಿನ್ನೀಸ್ ದಾಖಲೆ ನಿರ್ಮಿಸಿದ್ದಾನೆ.


ಪಂಜಾಬ್‌ನ ಸಿದ್ದಕ್ ದೀಪ್ ಸಿಂಗ್ ಚಾಹಲ್ ಎನ್ನುವ 15 ವರ್ಷದ ಬಾಲಕ ಈ ಸಾಧನೆ ಮಾಡಿದ್ದಾನೆ.ಸಿದ್ದಕ್ ದೀಪ್ ಸಾಧನೆ ಕುರಿತ ವಿಡಿಯೋ ಮಾಹಿತಿಯನ್ನು ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಎಕ್ಸ್ ನಲ್ಲಿ ಹಂಚಿಕೊAಡಿದೆ. ಸಿದ್ದಕ್ ದೀಪ್ ಕೂದಲು 4.26 ಅಡಿ ಉದ್ದ ಅಂದರೆ 130 ಸೆಂಟಿಮೀಟರ್ ಉದ್ದ ಬೆಳೆದಿದ್ದು, ಕೂದಲನ್ನು ಸುಂದರವಾಗಿ ಕಾಪಾಡಿಕೊಂಡು ಬಂದಿದ್ದಾನೆ. ನಾನು ನನ್ನ ಜೀವನದಲ್ಲಿ ಎಂದೂ ಕೂದಲನ್ನು ಕತ್ತರಿಸಲಿಲ್ಲ. ಏಕೆಂದರೆ ಸಿಖ್ ಧಾರ್ಮಿಕತೆಯ ಪ್ರಕಾರ ನಾನು ಕೂದಲನ್ನು ಕತ್ತರಿಸದೇ ಹಾಗೇ ಬಿಟ್ಟೆ. ಕ್ರಮೇಣ ಹೆಚ್ಚಾಗುತ್ತಾ ಹೋದರೂ ನಾನು ಕತ್ತರಿಸದಿರಲು ನಿರ್ಧರಿಸಿದೆ. ಈಗ ಅದು ವಿಶ್ವ ದಾಖಲೆಯಾಗಿರುವುದು ಸಂತೋಷ ನೀಡುತ್ತಿದೆ ಎಂದು ಸಿದ್ದಕ್ ದೀಪ್ ಹೇಳಿದ್ದಾನೆ. ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಬಾಲಕನ ಸಂದರ್ಶಿಸಿ ವಿಡಿಯೋ ಮಾಡಿ ಪುರಸ್ಕಾರ, ಪ್ರಮಾಣಪತ್ರ ನೀಡಿ ಗೌರವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು