ಚಂದ್ರಯಾನ 3 ವಿರುದ್ಧ ಅವಹೇಳನಕಾರಿ, ವಿವಾದಾತ್ಮಕ ಪೋಸ್ಟ್ – ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್

ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ನಟ ಪ್ರಕಾಶ್ ರಾಜ್ ಇದೀಗ ಚಂದ್ರಯಾನ-3 ಬಗ್ಗೆ ಮಾತಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ನೆಟ್ಟಿಗರು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಇನ್ನೊಂದೆಡೆ ಅವರ ವಿರುದ್ದ ದೂರು ದಾಖಲಾಗಿದೆ.


ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ವಿರುದ್ದ ದೂರು ನೀಡಲಾಗಿದೆ. ಹಿಂದೂ ಸಂಘಟನೆ ಮುಖಂಡ ನಂದು ಗಾಯಕವಾಡ ಮತ್ತಿತರರು ದೂರು ನೀಡಿದ್ದಾರೆ.















