Wednesday, June 10, 2026
ಉಡುಪಿಸುದ್ದಿ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ – ಕಹಳೆ ನ್ಯೂಸ್

ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉಡುಪಿ ಜಿಲ್ಲೆಯ ಕೆಮ್ಮಣ್ಣು ನಿವಾಸಿ ರಾಘವೇಂದ್ರ (44) ವರ್ಷ ಇವರು ನಾಪತ್ತೆಯಾಗಿದ್ದರು. ಇವರ ಮೊಬೈಲ್, ಕೊಡೆ, ಚಪ್ಪಲಿ ಹೂಡೆಯ ಕಡಲ ಕಿನಾರೆಯಲ್ಲಿ ದೊರೆತಿದೆ.

ಜಾಹೀರಾತು

ಇಂದು ಮಧ್ಯಾಹ್ನ 1:00 ಗಂಟೆಗೆ ಆಪತ್ಭಾಂಧವ ಈಶ್ವರ ಮಲ್ಪೆಯವರಿಗೆ ಮಲ್ಪೆ ಪಡುಕೆರೆ ಸಮುದ್ರದಲ್ಲಿ ಶವ ತೇಲಾಡುತ್ತಿರುವ ವಿಷಯ ತಿಳಿದು ಆ ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ಮೃತದೇಹ ದಡ ಸಮೀಪ ಬರುವವರೆಗೆ ಸುಮಾರು ಎರಡು ಗಂಟೆಗಳ ಕಾಲ ಕಾದು ಕುಳಿತು, ಸಮುದ್ರದ ನೀರಿನಲ್ಲಿ ಇಳಿದು ಶವವನ್ನು ಮೇಲಕ್ಕೆ ತಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತದೇಹವನ್ನು ಆಪತ್ಭಾಂಧವ ಈಶ್ವರ್ ಮಲ್ಪೆಯವರ ಆಂಬುಲೆನ್ಸ್ ಮೂಲಕ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮಳೆಗಾಲದ ಈ ಸಮಯದಲ್ಲಿ ಕಡಲು ಪ್ರಕ್ಶುಬ್ಧಗೊಂಡಿರುವಾಗ ಯಾವುದೇ ದೋಣಿಯ ಸಹಾಯವಿಲ್ಲದೆ ಸರಕಾರದ ಯಾವುದೇ ಇಲಾಖೆಯ ಸಹಕಾರವಿಲ್ಲದೆ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಆಪದ್ಬಾಂಧವ ಈಶ್ವರ ಮಲ್ಪೆ ಜೊತೆಗೆ ಶಬ್ಬೀರ್ ಮಲ್ಪೆ, ರಕ್ಷಿತ್ ಕಾಪು, ದೀಪು ಮಲ್ಪೆ ಹಾಗೂ ಇಮ್ತಿಯಾಝ್ ಕೆಮಣ್ಣು, ಪ್ರತಾಪ್ ಪಡುಕೆರೆ , ಪ್ರವೀಣ್ ಮಲ್ಪೆ , ಹರ್ಷಿತ್ ಜೆ ಕುಂದರ್ ಭಾಗಿಯಾಗಿದ್ದರು.