Recent Posts

Saturday, April 25, 2026
ಸುದ್ದಿ

ಪಾಣೆಮಂಗಳೂರು ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 2022-23 ನೇ ಸಾಲಿನ ಮಹಾಸಭೆ ಕಾರ್ಯಕ್ರಮ – ಕಹಳೆ ನ್ಯೂಸ್

ಪಾಣೆಮಂಗಳೂರು ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 2022-23 ನೇ ಸಾಲಿನ ಮಹಾಸಭೆಯು ಜು 25ರಂದು ಪಾಣೆಮಂಗಳೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರೋ! ಪ್ರಕಾಶ್ ಕಾರಂತ ನರಿಕೊಂಬು ಇವರ ಅಧ್ಯಕ್ಷತೆಯಲ್ಲಿ ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲೆ ಪಾಣೆಮಂಗಳೂರು ಇಲ್ಲಿ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಕೌಟ್ ಚಟುವಟಿಕೆಗಳ ವಾರ್ಷಿಕ ಯೋಜನೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಂತರ ಮೂಡಬಿದ್ರೆಯಲ್ಲಿ ಜರಗಿದ ರಾಜ್ಯಮಟ್ಟದ ಸಾಂಸ್ಕ್ರತಿಕ ಜಾಂಬೂರಿಯಲ್ಲಿ ಭಾಗವಹಿಸಿದ ಸ್ಥಳೀಯ ಸಂಸ್ಥೆಯ ಐದು ಶಾಲೆಗಳ ಸ್ಕೌಟರ್ ರವರನ್ನು ಸನ್ಮಾನಿಸಲಾಯಿತು.

ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ವಿಶೇಷರ್ಯಾಲಿ ನಡೆಸುವುದು, ವುಡ್ ಬ್ಯಾಡ್ಜ್ ತರಬೇತುದಾರರ ಮೀಟ್, ನಡೆಸುವುದೆಂದು ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ, ಸಮಿತಿ ಸದಸ್ಯರಾದ ಲೀಲಾ, ಶ್ವೇತಾ ಕಾಮತ್ ಮುಖ್ಯ ಶಿಕ್ಷಕರು ಎಸ್ ಎಲ್ ಎನ್ ಪಿ ಶಾಲೆ ಪಾಣೆಮಂಗಳೂರು, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಜಯಂತ್ ನಾಯಕ್, ಉಪಸ್ಥಿತರಿದ್ದರು.