Wednesday, March 18, 2026
ಸುದ್ದಿ

ಟೊಮ್ಯಾಟೊ ಕಾಯಲು ಇಬ್ಬರು ಬೌನ್ಸರ್ ಗಳ ನೇಮಕ ಮಾಡಿದ ವ್ಯಾಪಾರಿ – ಕಹಲೆ ನ್ಯೂಸ್

ದೇಶಾದ್ಯಂತ ಟೊಮೆಟೋ ದರ ಗಗನಕ್ಕೇರಿರುವಂತೆಯೇ ಹಲವು ಕಡೆ ಟೊಮೆಟೊ ಕಳ್ಳತನವಾಗುತ್ತಿರುವ ಘಟನೆ ಕೇಳಿಬರುತ್ತಿದ್ದು, ಇಲ್ಲೊಬ್ಬ ತರಕಾರಿ ವ್ಯಾಪಾರಿಯೋರ್ವ ಬುದ್ಧಿವಂತಿಕೆಯಿoದ ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ಗಳನ್ನು ನೇಮಿಸಿದ್ದು, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಹೌದು.. ಉತ್ತರ ಪ್ರದೇಶದ ವಾರಣಸಿಯ ತರಕಾರಿ ವ್ಯಾಪಾರಿಯೊಬ್ಬ ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ಗಳನ್ನು ನೇಮಿಸಿದ್ದು, ಅಜಯ್ ಫೌಜಿ ಎಂಬಾತ ತನ್ನ ಟೊಮೊಟೋ ಬೆಳೆಯನ್ನು ಕಾಯಲು ಬೌನ್ಸರ್ ಮೊರೆ ಹೋಗಿರುವ ವ್ಯಕ್ತಿಯಾಗಿದ್ದು, ಕೆಲವೆಡೆ ಟೊಮೊಟೊ ಕಳ್ಳತನ ನಡೆದ ಘಟನೆಗಳು ನಡೆದಿದೆ. ಹೀಗಾಗಿ ಈ ಸಮಸ್ಯೆ ಇಲ್ಲಿ ಆಗಬಾರದು ಎಂದು ಇಬ್ಬರು ಬೌನ್ಸರ್ ನೇಮಕ ಮಾಡಿದ್ದೇನೆ ಎಂದು ಅಜಯ್ ಫೌಜಿ ತಿಳಿಸಿದ್ದಾರೆ.

ಟೊಮೆಟೊ ಬೆಲೆ ಯಾವ ರೀತಿ ಹೆಚ್ಚಾಗಿದೆ ಎಂದು ನಿಮಗೆ ತಿಳಿದಿದೆ. ನಮ್ಮಲ್ಲಿ ಟೊಮೆಟೊ ಮಾರಾಟಕ್ಕೆ ಇದ್ದು . ಆದರೆ ಜಗಳ, ಹಲ್ಲೆಗಳು ನಡೆಯಬಾರದು ಎಂಬ ಕಾರಣಕ್ಕೆ ಮೊದಲೇ ಈ ಸಮಸ್ಯೆಗಳು ತಲೆದೋರದಂತೆ ನೋಡಿಕೊಳ್ಳಲು ಬೌನ್ಸರ್ ನೇಮಕ ಮಾಡಿದ್ದೇನೆ. ನಾವು ಕೆಜಿಗೆ 160 ರೂಪಾಯಿಯಂತೆ ಟೊಮೆಟೋ ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರು 100 ಗ್ರಾಂ, 50 ಗ್ರಾಂ ಖರೀದಿಸುತ್ತಿದ್ದಾರೆ ಎಂದು ಅಜಯ್ ಫೌಜಿ ಹೇಳಿದ್ದಾರೆ.