ಧರ್ಮಸ್ಥಳ ಸೌಜನ್ಯ ಸಾವು ಪ್ರಕರಣ: ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತಾಗಿದ್ದು ಹೇಗೆ ಗೊತ್ತೇ? – ಕಹಳೆ ನ್ಯೂಸ್

ಬೆಳ್ತಂಗಡಿ: ಇಡೀ ರಾಜ್ಯಾದ್ಯಂತ ಗಮನ ಸೆಳೆದ ಪ್ರಕರಣ ಧರ್ಮಸ್ಥಳದ ಸೌಜನ್ಯ ಸಾವಿನ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಆರೋಪಿ ಸಂತೋಷ ರಾವ್ ನಿರಪರಾಧಿ ಎಂದು ಸಾರಿದೆ.

ಸಂತೋಷ್ ರಾವ್ ದೋಷಿ ಎಂದು ಸಾಬೀತುಪಡಿಸಲು ಸಾಕ್ಷಾಧಾರದ ಕೊರತೆ ಇದೆ ಎಂದು ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಸಂತೋಷ್ ಸಿಬಿ ಅಭಿಪ್ರಾಯ ಪಟ್ಟಿದ್ದಾರೆ.
ಆರೋಪಿ ಸಂತೋಷ್ ರಾವ್ ಪರವಾದಿಸಿದ್ದ ಯುವ ನ್ಯಾಯವಾದಿಗಳಾದ ಮೋಹಿತ್ ಕುಮಾರ್ ಹಾಗೂ ನವೀನ್ ಕುಮಾರ್ ಪದ್ಯಾಣ ವಾದವನ್ನು ಪರಿಗಣಿಗೆ ತೆಗೆದುಕೊಂಡ ನ್ಯಾಯಾಲಯ ಸಂತೋಷ್ ರಾವ್ ನಿರಪರಾಧಿ ಎಂದು ಹೇಳಿದೆ
ಸಂತೋಷ್ ರಾವ್ ಯಾಕೆ ನಿರಪರಾಧಿ ಎಂದು ಸಾಬೀತಾಗಿದೆ ಗೊತ್ತೇ?
ಅತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ಕೊಲೆಯಾದ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ. ಎರಡು ದಿನಗಳ ನಂತರ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಹತ್ತಿರದಲ್ಲಿ ಇದ್ದ ಪ್ರಕೃತಿ ಚಿಕಿತ್ಸಾಲಯದ ಸಿಸಿಟಿವಿ ದೃಶ್ಯಗಳನ್ನು ಪೋಲೀಸರು ಸಾಕ್ಷವಾಗಿ ಪರಿಗಣಿಸಲಿಲ್ಲ. ಪೋಸ್ಟ್ ಮಾರ್ಟಮ್ ಬ್ಯಾಡ್ ಲೈಟ್ ನಲ್ಲಿ ಮಾಡಲಾಗಿತ್ತು.
ಆರೋಪಿ ಸಂತೋಷ ರಾವ್ ೫೦ ಮೀಟರ್ ಅಂತರದಲ್ಲಿ ಟೆಂಟಿನಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ಅಂದಾಜು ಮಾಡಿದರೆ ಹೊರತು ಸರಿಯಾದ ಸಾಕ್ಷವನ್ನು ನ್ಯಾಯಾಲಯದ ಮುಂದೆ ಇಟ್ಟಿರಲಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಆರೋಪಿ ಪರ ವಕೀಲರು ಬೆಟ್ಟು ಮಾಡಿ ತೋರಿಸಿ ಪೊಲೀಸರ ಸಾಕ್ಷ್ಯ ದ ಬಗ್ಗೆ ಪ್ರಶ್ನೆ ಮಾಡಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಈ ತೀರ್ಪನ್ನು ನೀಡಿದೆ ಎಂದು ಅಭಿಪ್ರಾಯಪಡಲಾಗಿದೆ.
ಪೊಲೀಸರ ತನಿಖೆಯ ವೈಫಲ್ಯ ಈ ಪ್ರಕರಣದಲ್ಲಿ ಕಂಡು ಬರುತ್ತಿದೆ ಎಂದು ಸಾರ್ವಜನಿಕರ ಅಭಿಪ್ರಾಯಪಡುತ್ತಿದ್ದಾರೆ.
ದಿಫಾಲ್ಟ್ ಆಫ್ ಎವಿಡೆನ್ಸ್ (default of evidence) ಬಗ್ಗೆ ನ್ಯಾಯವಾದಿಗಳ ವಾದವನ್ನು ಸಿಬಿಐ ನ್ಯಾಯಾಲಯ ಪರಿಗಣಿಸಿ ಈ ತೀರ್ಪನ್ನು ನೀಡಿದ ಎನ್ನಲಾಗಿದೆ.
ಅದೇ ರೀತಿ ಕೊಲೆಯಾದ ಹುಡುಗಿಯ ಚಪ್ಪಲಿ, ಛತ್ರಿ ಯನ್ನು ಸೀಸ್ ಮಾಡಿಲ್ಲ. ಅಲ್ಲದೆ ಬ್ಯಾಗಿನಲ್ಲಿದ ಪುಸ್ತಕ ಒದ್ದೆಯಾಗದೆ ಇರುವುದು ಬಹುದೊಡ್ಡ ಸಂಶಯವನ್ನು ಈ ಪ್ರಕರಣದಲ್ಲಿ ಮೂಡಿಸಿತು.
ಆರೋಪಿಯ ಪರವಾಗಿ ಯವ ನ್ಯಾಯವಾದಿಗಳಾದ ಮೋಹಿತ್ ಕುಮಾರ್ ಕೆ. ಹಾಗೂ ನವೀನ್ ಕುಮಾರ್ ಪದ್ಯಾಣ ವಾದಿಸಿದ್ದರೆ, ಸಿಬಿಐ ಪರ ಶಿವಾನಂದ ಪೆರ್ಲ ವಾದ ಮಂಡಿಸಿದ್ದರು.















