Thursday, March 19, 2026
ಸುದ್ದಿ

ಪ್ರೀತಿಗೆ ವಿರೋಧ- ಪ್ರೇಮಿಗಳಿಬ್ಬರ ಹತ್ಯೆ ಮಾಡಿ ದೇಹಕ್ಕೆ ಕಲ್ಲು ಕಟ್ಟಿ ನದಿಗೆ ಎಸೆದೆ ಪೋಷಕರು. – ಕಹಳೆ ನ್ಯೂಸ್

ಪ್ರೇಮಿಗಳಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಪೋಷಕರು ಅವರನ್ನು ಹತ್ಯೆ ಮಾಡಿ ದೇಹಕ್ಕೆ ಕಲ್ಲುಕಟ್ಟಿ ಮೊಸಳೆಗಳಿರುವ ಸ್ಥಳಕ್ಕೆ ಎಸೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಮಧ್ಯಪ್ರದೇಶದ ರತನ್ ಬಸಾಯ್ ಶಿವಾನಿ ತೋಮರ್ ಯುವತಿಯು ಹಾಗೂ ಪೊರೆನಾ ಜಿಲ್ಲೆಯ ಬಾಲುಪುರದ ರಾಧೇಶ್ಯಾಮ್ ತೋಮರ್ ಯುವಕನು ಹತ್ಯೆಗೊಳಗಾದವರು ಎಂದು ಗುರುತಿಸಲಾಗಿದೆ.

ಶಿವಾನಿ ತೋಮರ್ ಹಾಗೂ ರಾಧೇಶ್ಯಾಮ್ ತೋಮರ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ಹಾಗಾಗಿ ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಆಕೆಯ ಪೋಷಕರು ಪ್ರೇಮಿಗಳಿಬ್ಬರನ್ನು ಹತ್ಯೆ ಮಾಡಿ ದೇಹಕ್ಕೆ ಕಲ್ಲು ಕಟ್ಟಿ ನದಿಗೆ ಎಸೆದಿರುವುದು ಬೆಳಕಿಗೆ ಬಂದಿದೆ.

ಯುವತಿಯ ಪೋಷಕರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಕಾರಣದಿಂದ ಇಬ್ಬರೂ ಕಾಣೆಯಾಗಿದ್ದರು.
ಈ ಕುರಿತು ಹುಡುಗನ ತಂದೆ ಅವರನ್ನು ಹತ್ಯೆ ಮಾಡಿರಬಹುದು ಎನ್ನುವ ಸಂದೇಹವಿದೆ ಎಂದು ಪ್ರಕರಣ ದಾಖಲಿಸಿದ್ದರು.
ಮೊದಲು ಅವರಿಬ್ಬರೂ ಓಡಿ ಹೋಗಿರಬಹುದು ಎಂದು ಪೊಲೀಸರು ತಿಳಿದಿದ್ದು ಬಳಿಕ ಯುವತಿಯ ತಂದೆಯನ್ನು ಕರೆಸಿ, ಪೊಲೀಸರು ವಿಚಾರಣೆ ನಡೆಸಿದಾಗ ನಿಜಾ ಘಟನೆ ಬೆಳಕಿಗೆ ಬಂದಿದೆ.

ಶಿವಾನಿ ಹಾಗೂ ರಾಧೆ ಶಾಮ್ ನನ್ನು ಜೂ. 3ರಂದು ಗುಂಡಿಕ್ಕಿ ಹತ್ಯೆ ಮಾಡಿ ನಂತರ ಅವರ ದೇಹಕ್ಕೆ ಕಲ್ಲು ಕಟ್ಟಿ, ಮೊಸಳೆಗಳಿರುವ ಚಂಬಲ್ ನದಿಯಲ್ಲಿ ಎಸಲಾಗಿದೆ ಎಂದು ಇದೀಗ ಆಕೆಯ ಪೋಷಕರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.