
ಕಾಪು : ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡ್ ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆದಿದ್ದು, ಈ ವೇಳೆ ಸಮರ್ಪಕ ರೀತಿಯಲ್ಲಿ ನಡೆಯದಿರುವುದೇ ಘಟನೆ ಕಾರಣ ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮುಂಜಾನೆ ಘಟನೆ ಸಂಭವಿಸಿದ್ದು, ಬೈಕ್‌ಗಳು ಸಂಪೂರ್ಣ ಮಣ್ಣಿನಡಿ ಮುಳುಗಿವೆ. ಇನ್ನು ರಿಕ್ಷಾ ಮುಂದೆ ಚಲಿಸಿದ್ದು ಅಲ್ಪಮಟ್ಟಿನ ಹಾನಿಯಾಗಿದೆ. ಅಬ್ದುಲ್ ಖಾದರ್, ಅಬ್ದುಲ್ ಕಬೀರ್ ಎಂಬುವರ ಬೈಕ್ ಮತ್ತು ಶರೀಪ್ ಎಂಬವರ ರಿಕ್ಷಾ ಹಾನಿಗೊಳಗಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲ ನಡೆಸಿದ್ದಾರೆ.















