Wednesday, March 18, 2026
ಸುದ್ದಿ

ಬೊಂದೆಲ್‌ನ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ನೂತನ ಹಾಸ್ಟೆಲ್‌ ಉದ್ಘಾಟಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

2.45 ಕೋಟಿ ರೂ.ವೆಚ್ಚದಲ್ಲಿ ಬೊಂದೆಲ್‌ನಲ್ಲಿ ಇರುವ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ ನೂತನ ವಿದ್ಯಾರ್ಥಿನಿಯರ ಹಾಸ್ಟೆಲ್‌ ಅನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಉದ್ಘಾಟಿಸಿದರು.
ವಿದ್ಯಾರ್ಥಿನಿಯರ ಹಾಸ್ಟೆಲ್‌ ದುಸ್ಥಿತಿಯಲ್ಲಿದ್ದ ಸಂದರ್ಭ ಇಲ್ಲಿನ ವಿದ್ಯಾರ್ಥಿನಿಗಳು ಮನವಿ ಮಾಡಿದ್ದರು. ವಿದ್ಯಾರ್ಥಿನಿಯರ ಮನವಿಗೆ ಸ್ಪಂದಿಸಿ ಹೊಸ ಹಾಸ್ಟೆಲ್ ನಿರ್ಮಿಸಲಾಗಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು.

ಉತ್ತಮ ಮೂಲಸೌಲಭ್ಯ ದೊರಕಿದಾಗ ಶಿಕ್ಷಣದಲ್ಲಿಯೂ ವಿದ್ಯಾರ್ಥಿನಿಯರು ಗಮನ ಕೇಂದ್ರೀಕರಿಸಿ ಸಾಧನೆಗೈಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾಂಶುಪಾಲೆ ಬಿ.ಕಮಲಾಕ್ಷಿ, ವಾರ್ಡನ್ ವನಮಾಲ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು