
ಪ್ರಕಾಶ್ ತೂಮಿನಾಡ್.. ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪೋಷಕ ನಟ ಹಾಗೂ ಹಾಸ್ಯ ನಟ. ತನ್ನ ಅಮೋಘ ನಟನೆ ಮೂಲಕ ಎಲ್ಲರ ಗಮನ ಸೆಳೆದ ಇವರಿಗೆ ಇದೀಗ ಚಿತ್ರಸಂತೆ ಫಿಲ್ಮ್ ಅವಾರ್ಡ್ 2023 ಲಭಿಸಿದೆ. ಬೆಂಗಳೂರಿನಲ್ಲಿ ನಡೆದ ಅವಾರ್ಡ್ ಫಂಕ್ಷನ್‌ನಲ್ಲಿ ಈ ಅವಾರ್ಡ್ನ್ನ ಪ್ರಕಾಶ ತೂಮಿನಾಡು ಸ್ವೀಕರಿಸಿದ್ದಾರೆ. ಪ್ರಕಾಶ್ ತೂಮಿನಾಡು ವಿಶ್ವದಾದ್ಯಂತ ಪ್ರಸಿದ್ಧಿಯನ್ನು ತಂದುಕೊಟ್ಟ ಕಾಂತಾರ ಸಿನಿಮಾದ ರಾಂಪಾ ಪಾತ್ರಧಾರಿಯೂ ಹೌದು. ಇವರ ಸಾಧನೆ ಇನ್ನಷ್ಟು ಪಸರಿಸಲಿ ಅನ್ನೋದೇ ನಮ್ಮ ಆಶಯ.
















