
ಪದಬರಿ ಶ್ರೀ ವನದುರ್ಗ ಅಷ್ಟದೇವತಾ ಸಾನಿಧ್ಯದಲ್ಲಿ ಇಂದು ಗಣ ಹೋಮ ಮತ್ತು ಮೃತ್ಯುಂಜಯ ಹೋಮ ನಡೆದಿದೆ. ಪೊಳಲಿಯ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ಪೌರೋಹಿತ್ಯದಲ್ಲಿ ಪೂಜೆ ನಡೆದಿದ್ದು, ಊರಿನ ಭಕ್ತಾಧಿಗಳು ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದರು.

ಪದಬರಿಯ ಪುಣ್ಯ ಮಣ್ಣಿನಲ್ಲಿ ಶ್ರೀ ವನದುರ್ಗಾ ಅಷ್ಟದೇವತಾ ಸಾನಿಧ್ಯ ಇರುವ ಬಗ್ಗೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಜೀಣೋದ್ಧಾರ ಕಾರ್ಯಕ್ಕೆ ಮುನ್ನಡಿ ಇಡಲಾಗಿದೆ. ಹೀಗಾಗಿ ಶ್ರೀ ವನದುರ್ಗಾ ಅಷ್ಟದೇವತಾ ಸಾನಿಧ್ಯದ ಜೀರ್ಣೋದ್ಧಾರ ಆರಂಬಿಸುವ ಮೊದಲು, ಬಾಲಾಲಯ ಪ್ರತಿಷ್ಠೆಗೆ ಮುಂಚಿತವಾಗಿ ಊರಿಗೆ ಬರುವ ದುರಿತಗಳ ನಿವಾರಣೆ ಹಾಗೂ ಯಾವುದೇ ಅವಘಡಗಳು ಸಂಭವಿಸದ0ತೆ ಗಣ ಹೋಮ ಮತ್ತು ಮೃತ್ಯುಂಜಯ ಹೋಮ ನಡೆಸಲಾಗಿದೆ.


ಪದಬರಿಯಲ್ಲಿ ಪ್ರತಿ ಸಂಕ್ರಮಣದ0ದು ದೈವ ದೇವರುಗಳಿಗೆ ಪ್ರಾರ್ಥನೆಯೂ ನಡೆಯುತ್ತಿದೆ. ಇನ್ನು ಇಂದು ನಡೆದ ಗಣ ಹೋಮ ಮತ್ತು ಮೃತ್ಯುಂಜಯ ಹೋಮದಲ್ಲಿ ಭಕ್ತಾಧಿಗಳು ಭಾಗಿಯಾಗಿ ಶ್ರೀದೇವರ ಪ್ರಸಾದವನ್ನ ಸ್ವೀಕರಿಸಿ ಪುನೀತರಾಗಿದ್ದಾರೆ.















