Wednesday, March 18, 2026
ಸುದ್ದಿ

ವಿಟ್ಲದ ಅಳಿಕೆಯಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ –ಕಹಳೆ ನ್ಯೂಸ್

ವಿಟ್ಲದ ಅಳಿಕೆ ಗ್ರಾಮದ ಕುದ್ದುಪದವು ನಿವಾಸಿ ಆನಂದ ಪೂಜಾರಿರವರು ತನ್ನ ಮನೆಯ ಪಕ್ಕದಲ್ಲಿರುವ ಅಡಿಕೆ ಕೊಠಡಿಯಲ್ಲಿ ಮದ್ಯದ ಬಾಟ್ಲಿಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಠಾಣಾ ಪಿಎಸ್‌ಐ ಸಂದೀಪ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಆನಂದ ಪೂಜಾರಿ ಪರಾರಿಯಾಗಲು ಪ್ರಯತ್ನಿಸಿದ್ದು , ಆತನ್ನು ಹಿಡಿದು ವಿಚಾರಿಸಿದಾಗ ಯಾವುದೇ ಪರವಾಣಿಗೆಯಾ ದಾಖಲಾತಿಗಳನ್ನು ಹೊಂದದೆ ಕೊಠಡಿಯೊಳಗೆ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮೈಸೂರು ಲ್ಯಾನ್ಸರ್ ಕಂಪನಿಯ 90ಒಐನ ಟೆಟ್ರಾ ಪ್ಯಾಕೇಟ್‌ಗಳು-61, ಓರಿಜಿನಲ್ ಚಾಯ್ಸ್ ಕಂಪನಿಯ 90ಒಐನ 19 ಟೆಟ್ರಾ ಪ್ಯಾಕೇಟ್‌ಗಳು, 3000 ರೂಪಾಯಿ ಮೌಲ್ಯದ , 7.200 ಲೀಟರ್ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು