
ಜಿಲ್ಲೆಯಾದ್ಯಂತ ಜನವರಿ 21ರಿಂದ ಜನವರಿ 29 ರವರೆಗೆ “ವಿಜಯ ಸಂಕಲ್ಪ ಅಭಿಯಾನ” ನಡೆಯುತ್ತಿದ್ದು, ಶಿರಿಬೀಡು ವಾರ್ಡಿನಲ್ಲಿ ನಡೆದ “ವಿಜಯ ಸಂಕಲ್ಪ ಅಭಿಯಾನ” ದಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿದರು.


ಶಿರಿಬೀಡು ವಾರ್ಡಿನ ಮನೆ ಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಳೆ 2018 ರಿಂದ ಈ ವರೆಗೆ ಶಾಸಕ ರಘುಪತಿ ಭಟ್ ಅವರು ಮಂಜೂರುಗೊಳಿಸಿದ ಅನುದಾನದ ಸಮಗ್ರ ವಿವರದ ಸಾಧನೆಯ ಕಿರುಹೊತ್ತಿಗೆ ನೀಡುವುದರ ಜೊತೆಗೆ ಗೋಡೆಗಳಿಗೆ ಸ್ಟಿಕ್ಕರ್ ಅಂಟಿಸಿ 8000090009 ನಂಬರಿಗೆ ಕರೆ ನೀಡುವ ಮೂಲಕ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವದ ನೋಂದಣಿ ಮಾಡಲಾಯಿತು.


ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಟಿ.ಜಿ ಹೆಗ್ಡೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಉಜ್ವಲ ಕಿರಣ್, ಬೂತ್ ಅಧ್ಯಕ್ಷರಾದ ಮಹೇಶ್ ಶೆಟ್ಟಿ, ಮಹೇಶ್ ಪೂಜಾರಿ, ಸಚಿನ್ ಕೋಟ್ಯಾನ್, ಪಕ್ಷದ ಕಾರ್ಯಕರ್ತರಾದ ವಿಠ್ಠಲ್ ಆಚಾರ್ಯ, ಕೃಷ್ಣಶೆಟ್ಟಿ, ನಾಗಪ್ರಸಾದ್, ಅಶೋಕ್ ಶೆಟ್ಟಿ ಅಭಿಲಾಶ್, ಸುಧೀರ್ ಶೆಟ್ಟಿ ಸಂದೀಪ್ ಶೆಟ್ಟಿಗಾರ್, ಶ್ವೇತಾ ಶೆಟ್ಟಿ ಉಪಸ್ಥಿತರಿದ್ದರು.















